ಅಮಿತ್ ಶಾಗೆ ಟಾಂಗ್ ಕೊಡಲು ಹೊಸ ಯೋಜನೆ ಘೋಷಿಸಿದ ಅರವಿಂದ್ ಕೇಜ್ರಿವಾಲ್

Krishnaveni K

ಶನಿವಾರ, 21 ಡಿಸೆಂಬರ್ 2024 (15:09 IST)
ನವದೆಹಲಿ: ಇತ್ತೀಚೆಗೆ ಗೃಹಸಚಿವ ಅಮಿತ್ ಶಾ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ನೀಡಿದ ಹೇಳಿಕೆಯನ್ನೇ ಅಸ್ತ್ರ ಮಾಡಿಕೊಂಡಿರುವ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೊಸ ಯೋಜನೆ ಘೋಷಿಸಿದ್ದಾರೆ.

ದೆಹಲಿ ಚುನಾವಣೆ ಪ್ರಚಾರ ವೇಳೆ ಅರವಿಂದ್ ಕೇಜ್ರಿವಾಲ್ ಅಂಬೇಡ್ಕರ್ ಹೆಸರಿನ ಸ್ಕಾಲರ್ ಶಿಪ್ ಯೋಜನೆ ಘೋಷಿಸಿದ್ದು ಅಮಿತ್ ಶಾಗೆ ಟಾಂಗ್ ಕೊಟ್ಟಿದ್ದಾರೆ. ಅಮಿತ್ ಶಾ ಪ್ರಸ್ತಾಪಿಸಿದ್ದ ‘ಅಗೌರವ’ ಹೇಳಿಕೆಗೆ ತದ್ವಿರುದ್ಧವಾಗಿ ‘ಅಂಬೇಡ್ಕರ್ ಸಮ್ಮಾನ್’ ಎಂಬ ಸ್ಕಾಲರ್ ಶಿಪ್ ಯೋಜನೆ ಘೋಷಿಸಿದ್ದಾರೆ.

ಈ ಯೋಜನೆಯ ಅನ್ವಯ ವಿದೇಶೀ ವಿದ್ಯಾಲಯಗಳಿಗೆ ಪ್ರವೇಶ ಪಡೆಯುವ ದಲಿತ ವಿದ್ಯಾರ್ಥಿಗಳಿಗೆ ದೆಹಲಿಯ ಆಮ್ ಆದ್ಮಿ ಸರ್ಕಾರ ಸ್ಕಾಲರ್ ಶಿಪ್ ಯೋಜನೆಯಡಿ ಆರ್ಥಿಕ ಸಹಾಯ ಒದಗಿಸಲಿದೆ. ಹಣದ ಕೊರತೆಯಿಂದ ದಲಿತ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಬಾರದು ಎಂಬ ಏಕೈಕ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಅಂಬೇಡ್ಕರ್ ಅವರನ್ನು ಅಮಿತ್ ಶಾ ಅಪಹಾಸ್ಯ ಮಾಡಿದ್ದು ನೋಡಿ ನನಗೆ ನೋವಾಯಿತು. ಸಂಸತ್ತಿನಲ್ಲಿ ಅಂಬೇಡ್ಕರ್ ಅವರನ್ನು ಅವಮಾನ ಮಾಡುತ್ತಾರೆಂದು ಯಾರೂ ಊಹಿಸಿರಲಿಲ್ಲ. ಅಮಿತ್ ಶಾ ಹೇಳಿಕೆಗೆ ಪ್ರತಿಯಾಗಿ ನಾನು ಇಂದು ಅಂಬೇಡ್ಕರ್ ಸಮ್ಮಾನ್ ಯೋಜನೆ ಘೋಷಿಸುತ್ತಿರುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ