ನೀವು ವಾಟ್ಸಪ್ ಗ್ರೂಪ್ ಅಡ್ಮಿನ್ ಗಳೇ? ಹಾಗಿದ್ದರೆ ಈ ಸುದ್ದಿ ಓದಿ!

ಶುಕ್ರವಾರ, 21 ಏಪ್ರಿಲ್ 2017 (07:29 IST)
ನವದೆಹಲಿ: ಜನಪ್ರಿಯ ಆಪ್ ವಾಟ್ಸಪ್ ನಲ್ಲಿ ಏನೇನೋ ಗ್ರೂಪ್ ಕಟ್ಟಿಕೊಂಡು ಆಡ್ಮಿನ್ ಗಳೆಂದು ಮೆರೆಯುತ್ತಿರುವವರೆಲ್ಲಾ ಈ ಸುದ್ದಿ ಓದುವುದು ಒಳ್ಳೆಯದು. ನಿಮ್ಮ ಗ್ರೂಪ್ ನ ಚಟುವಟಿಕೆಗಳಿಗೆ ನೀವೇ ಹೊಣೆಯಾಗಲಿದ್ದೀರಿ.

 
ವಾಟ್ಸಪ್ ಅಥವಾ ಫೇಸ್ ಬುಕ್ ಗ್ರೂಪ್ ನಲ್ಲಿ ಸುಳ್ಳು ಸುದ್ದಿ, ಮಾನಹಾನಿ ತರುವಂತಹ ಸುದ್ದಿಗಳು ಅಥವಾ ಸಮಾಜದ ಸಾಮರಸ್ಯ ಕೆಡಿಸುವಂತಹ ಸುದ್ದಿಗಳನ್ನು ಹಾಕಿದರೆ ಇನ್ನು ಆಡ್ಮಿನ್ ಗಳು ಜೈಲು ಸೇರಬೇಕಾದೀತು ಹುಷಾರ್!

ಜಿಲ್ಲಾ ಮ್ಯಾಜಿಸ್ಟ್ರೇಟ್ ಯೋಗೇಶ್ವರ್ ರಾಮ್ ಮಿಶ್ರಾ ಮತ್ತು ಹಿರಿಯ ಪೊಲೀಸ್ ಅಧಿಕಾರಿ ನಿತಿನ್ ತಿವಾರಿ ಜಂಟಿ ಹೇಳಿಕೆ ಬಿಡುಗಡೆ ಮಾಡಿ ಈ ಆದೇಶ ಮಾಡಿದ್ದಾರೆ. ಅಂತಹ ಸುದ್ದಿ ಹಬ್ಬುವ ಗ್ರೂಪ್ ಆಡ್ಮಿನ್ ಗಳ ಮೇಲೆ ಎಫ್ ಐಆರ್ ದಾಖಲಿಸಿ ಬಂಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ