ನವದೆಹಲಿ : ಭಾರತೀಯ ಯೋಧರಿಗೆಂದು ತಯಾರಿಸಲಾದ ನೂತನ ಸಮವಸ್ತ್ರವನ್ನು ಸೇನಾ ದಿನವಾದ ಇಂದು ಅನಾವರಣಗೊಳಿಸಲಾಯಿತು.
ಹಲವು ವಿಶೇಷತೆಗಳನ್ನು ಒಳಗೊಂಡ ಸೇನಾ ಸಮವಸ್ತ್ರವನ್ನು ಧರಿಸಿ ಪ್ಯಾರಾಚೂಟ್ ರೆಜಿಮೆಂಟ್ನ ಕಮಾಂಡೋಗಳ ತುಕಡಿ ಸೇನಾ ದಿನದ ಪಥಸಂಚನದಲ್ಲಿ ಭಾಗವಹಿಸಿತು.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಎನ್ಐಎಫ್ಟಿ) ಸಹಯೋಗದಲ್ಲಿ ಭಾರತ ಸೇನಾಪಡೆಯು ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ.
ಸೇನೆಗಾಗಿ ವಿನ್ಯಾಸಗೊಳಿಸಿರುವ ಹೊಸ ಸಮವಸ್ತ್ರ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಬ್ರಿಟಿಷ್ ಸೈನ್ಯವು ಬಳಸುವ ಮಾದರಿಯಂತೆ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. ವಿವಿಧ ದೇಶಗಳ ಸೇನಾ ಸಮವಸ್ತ್ರಗಳ ವಿಶ್ಲೇಷಣೆ ಮತ್ತು ವಿಸ್ತೃತ ಚರ್ಚೆ ನಂತರ ಈ ಸಮವಸ್ತ್ರವನ್ನು ಅಂತಿಮಗೊಳಿಸಲಾಗಿದೆ.
ಮಾರುಕಟ್ಟೆಯಲ್ಲಿ ಸಿಗಲ್ಲ
ಈ ಸಮವಸ್ತ್ರ ಮುಕ್ತ ಮಾರುಕಟ್ಟೆಯಲ್ಲಿ ಸಾರ್ವಜನಿಕವಾಗಿ ಲಭ್ಯವಿರುವುದಿಲ್ಲ ಎಂಬ ವಿಚಾರವನ್ನು ಮೂಲಗಳು ಸ್ಪಷ್ಟಪಡಿಸಿವೆ.