ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿ ಪರಾರಿಯಾದ ಆರೋಪಿಗಳ ಬಂಧನ
ಬುಧವಾರ, 15 ನವೆಂಬರ್ 2023 (14:44 IST)
ಮನೆಗೆ ನುಗ್ಗಿದ ಎಂಟು ಮಂದಿ ಆರೋಪಿಗಳು ಪತಿಯ ಎದುರಲ್ಲೇ ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿ ಪರಾರಿಯಾಗಿದ್ದಾರೆ. ಘಟನೆಯ ನಂತರ ದಂಪತಿಗಳು ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ರೇಪ್ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಾದ ಕೂಡಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.
ಮನೆಯ ಹುಡುಕಾಟದಲ್ಲಿದ್ದ 28 ವರ್ಷ ವಯಸ್ಸಿನ ಮಹಿಳೆಯ ಮೇಲೆ ಎಂಟು ಮಂದಿ ಆರೋಪಿಗಳು ಗ್ಯಾಂಗ್‌ರೇಪ್ ಎಸಗಿದ ಹೇಯ ಘಟನೆ ನಗರದ ಪ್ರದೇಶದಲ್ಲಿ ವರದಿಯಾಗಿದೆ.
ನಿನ್ನೆ ರಾತ್ರಿ ಮಹಿಳೆಯೊಬ್ಬಳ ನೆರವಿನೊಂದಿಗೆ ದಂಪತಿಗಳು ಸ್ಲಂ ಪ್ರದೇಶದಲ್ಲಿ ಮನೆಯ ಹುಡುಕಾಟದಲ್ಲಿದ್ದರು. ರಾತ್ರಿ ತುಂಬಾ ಸಮಯವಾಗಿದ್ದರಿಂದ ಮಹಿಳೆಯ ಮನೆಯಲ್ಲಿಯೇ ರಾತ್ರಿ ಕಳೆಯಲು ದಂಪತಿಗಳು ನಿರ್ಧರಿಸಿದ್ದಾರೆ,
ಏಳು ಆರೋಪಿಗಳನ್ನು ಬಂಧಿಸಲಾಗಿದ್ದು ಒಬ್ಬ ಆರೋಪಿ ಮಾತ್ರ ತಪ್ಪಿಸಿಕೊಂಡಿದ್ದಾನೆ. ಪರಾರಿಯಾದ ಆರೋಪಿಯನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು. ಗ್ಯಾಂಗ್‌ರೇಪ್‌ಗೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.