ಮನೆಯೊಳಗೆ ನುಗ್ಗಿ ಮಹಿಳೆಯ ಮೇಲೆ ಗ್ಯಾಂಗ್‌ರೇಪ್

ಮಂಗಳವಾರ, 14 ನವೆಂಬರ್ 2023 (14:04 IST)
ಇಬ್ಬರು ಹೆಣ್ಣು ಮಕ್ಕಳೊಂದಿಗೆ ತನ್ನ ಮನೆಯೊಳಗೆ ನಿದ್ರಿಸುತ್ತಿದ್ದ ಆಕೆಯನ್ನು ಹತ್ತಿರದ ಹೊಲಕ್ಕೆ ಎಳೆದೊಯ್ದ ಆರೋಪಿಗಳು ಆಕೆಯ ಮೇಲೆ ಅಮಾನುಷವಾಗಿ ಮುಗಿ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಭಾಗಿಯಾದ ಆರೋಪಿಗಳಲ್ಲಿ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಉಳಿದ ಇಬ್ಬರ ಪತ್ತೆಗೆ ಕಾರ್ಯಾಚರಣೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಎರಡು ಮಕ್ಕಳ ತಾಯಿಯಾಗಿರುವ ದಲಿತ ಸಮುದಾಯದ ಮಹಿಳೆಯೊಬ್ಬರನ್ನು ಆಕೆಯ ಮನೆಯಿಂದ ಹೊರಗೆಳೆದ  ಐವರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಭೂಪಾಲ್‌ನ ಗುಂಗಾ ಎಂಬ ಹಳ್ಳಿಯಲ್ಲಿ ನಡೆದಿದೆ.  
 
ಘಟನೆ ನಡೆದ ಸಂದರ್ಭದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುವ ಆಕೆಯ ಗಂಡ ಮನೆಯಲ್ಲಿ ಹಾಜರಿರಲಿಲ್ಲ.  ತೋಟದ ಮನೆಯಲ್ಲಿ ಆಕೆ ತನ್ನ ಪುಟ್ಟ ಪುಟ್ಟ ಮಕ್ಕಳೊಂದಿಗೆ ಮಲಗಿದ್ದಳು. 
 
ಆರೋಪಿಗಳನ್ನು ಜಗದೀಸ್, ಮುಸ್ತಾಕ್, ಮನೋಜ್, ಬಬ್ಲೂ ಮತ್ತು ಸೋನು ಎಂದು ಗುರುತಿಸಲಾಗಿದ್ದು, ಅವರೆಲ್ಲರೂ 18 ರಿಂದ 25 ವರ್ಷದ ಒಳಗಿನವರು ಎಂದು ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ