ವೇಶ್ಯಾವಾಟಿಕೆ ನಡೆಸುತ್ತಿದ್ದ ವಿದೇಶಿ ಮಹಿಳೆಯರ ಬಂಧನ

ಮಂಗಳವಾರ, 7 ನವೆಂಬರ್ 2023 (11:30 IST)
ನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮುಂಬೈನ ಇಬ್ಬರು ಯುವತಿಯರು ಮತ್ತು ವಿದೇಶಿ ಮಹಿಳೆಯರು  ಮತ್ತು ಪಿಂಪ್‌ನನ್ನು ಪೊಲೀಸರು ಬಂಧಿಸಿದ್ದು, ಭಾರಿ ಪ್ರಮಾಣದ ಮೊತ್ತ ಮತ್ತು ಕಾಂಡೋಮ್ ಹಾಗೂ ಬ್ಲ್ಯೂಫಿಲ್ಮ್ ಸಿಡಿಗಳನ್ನು ವಶಪಡಿಸಿಕೊಂಡಿದ್ದಾರೆ.
 
ನಗರದ ಕೊಟ್ರುಡ್ ಪ್ರದೇಶದಲ್ಲಿ ಹೈ ಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ವಿದೇಶಿ ಮಹಿಳೆಯರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
 
ಪೊಲೀಸ್ ಇನ್ಸೆಪೆಕ್ಟರ್ ಸಂಜಯ್ ನಿಕಮ್ ನೇತೃತ್ವದ ತಂಡ ಭೌವಸಾರಿ ಕಾಲೋನಿಯಲ್ಲಿರುವ ಖುಷ್ಬೂ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿ ವಿದೇಶಿ ಯುವತಿಯರು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಅಪರಾಧ ಪತ್ತೆ ದಳ ನೀಡಿದ ಸುಳಿವಿನ ಮೇರೆಗೆ ಈ ದಾಳಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಪೊಲೀಸ್ ಇನ್ಸೆಪೆಕ್ಟರ್ ನಿಕಮ್ ಪ್ರಕಾರ, ಪಿಂಪ್ ಕಲ್ಯಾಣಿ ದೇಶಪಾಂಡೆ ಮತ್ತು ಆಕೆಯ ಏಜೆಂಟ್ ರವಿ ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದರು. ಉಜ್ಬೇಕಿಸ್ತಾನ್ ಮೂಲದ ಇಬ್ಬರು ಯುವತಿಯರು ಮತ್ತು ಮುಂಬೈನ ಇಬ್ಬರು ಯುವತಿಯರು ಸೇರಿದ್ದಾರೆ ಎಂದು ತಿಳಿಸಿದ್ದಾರೆ.
 
ಪ್ರವಾಸಿ ವೀಸಾದ ಮೇಲೆ ಪುಣೆ ನಗರಕ್ಕೆ ಭೇಟಿ ನೀಡಿದ್ದ ಉಜ್ಬೇಕಿಸ್ತಾನ್ ಯುವತಿಯರನ್ನು ಪಿಂಪ್ ಕಲ್ಯಾಣಿ ದೇಶಪಾಂಡೆ ಭಾರಿ ಮೊತ್ತ ನೀಡಿ ವೇಶ್ಯಾವಾಟಿಕೆಗಾಗಿ ಖರೀದಿಸಿದ್ದಳು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ