ಭ್ರಷ್ಟಾಚಾರ ಮರೆಮಾಚಲು ಸಿಬಿಐಗೆ ನೋ ಎಂಟ್ರಿ ಎಂದಿದ್ದೀರಾ? ಆಂಧ್ರ, ಪ.ಬಂಗಾಲ ಸಿಎಂಗೆ ಅರುಣ್ ಜೇಟ್ಲಿ ಲೇವಡಿ

ಭಾನುವಾರ, 18 ನವೆಂಬರ್ 2018 (09:27 IST)
ನವದೆಹಲಿ: ಕೇಂದ್ರ ತನಿಖಾ ದಳ ಸಿಬಿಐಗೆ ಸಾಮಾನ್ಯ ತನಿಖೆ ಮತ್ತು ದಾಳಿ ನಡೆಸಲು ತಮ್ಮ ರಾಜ್ಯಗಳಲ್ಲಿ ಅನುಮತಿ ನಿರಾಕರಿಸಿರುವ ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಮತ್ತು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಲೇವಡಿ ಮಾಡಿದ್ದಾರೆ.

ನಿಮ್ಮ ಭ್ರಷ್ಟಾಚಾರಗಳ ಬಂಡವಾಳ ಹೊರ ಬೀಳುತ್ತದೆ ಎಂದು ಸಿಬಿಐನನ್ನು ಹೊರಗಿಟ್ಟಿದ್ದೀರಾ ಎಂದು ಎರಡೂ ರಾಜ್ಯಗಳ ಸಿಎಂಗಳಿಗೆ ಜೇಟ್ಲಿ ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.

‘ಸಿಬಿಐನನ್ನು ಹೊರಗಿಟ್ಟರೆ ನಿಮ್ಮ ಭ್ರಷ್ಟಾಚಾರಗಳನ್ನು ಅಡಗಿಸಿಡಲು ಸಾಧ್ಯವಿಲ್ಲ. ಮುಂದೆ ಏನಾಗುತ್ತೋ ಎಂಬ ಭಯಕ್ಕೆ ಸಿಬಿಐನನ್ನು ಹೊರಗಿಡಲಾಗಿದೆ. ನಮ್ಮದು ಸಂಯುಕ್ತ ಗಣರಾಜ್ಯ ರಾಷ್ಟ್ರ. ರಾಜ್ಯಗಳಲ್ಲಿ ನಡೆಯುವ ಹಲವು ಗಂಭೀರ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸಬೇಕಾಗುತ್ತದೆ. ಆದರೆ ಈ ಸಂಸ್ಥೆಗೆ ನಿಷೇಧ ಹೇರಲಾಗದು. ಇದು ಏನನ್ನೋ ಅಡಗಿಸಿಡಲು ಬಯಸುವರು ಮಾತ್ರ ಮಾಡಲು ಸಾಧ್ಯ’ ಎಂದು ಜೇಟ್ಲಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ