ಕ್ಯೂನಲ್ಲಿ ನಿಂತು ಓಟು ಹಾಕಿದ ಅರುಣ್ ಜೇಟ್ಲಿ

ಗುರುವಾರ, 14 ಡಿಸೆಂಬರ್ 2017 (11:07 IST)
ಅಹಮ್ಮದಾಬಾದ್: ಗುಜರಾತ್ ನಲ್ಲಿ ವಿಧಾನಸಭೆಗೆ ಎರಡನೇ ಹಂತದ ಚುನಾವಣೆ ನಡೆಯುತ್ತಿದ್ದು ಪ್ರಧಾನಿ ಮೋದಿ, ಅಮಿತ್ ಶಾ, ಅರುಣ್ ಜೇಟ್ಲಿ ಮತದಾನ ಮಾಡಿದರು.
 

ಇವರಲ್ಲಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ತಮ್ಮ ಸರದಿ ಬಂದಾಗ ಓಟು ಹಾಕಿ ಗಮನ ಸೆಳೆದರು. ಅಹಮ್ಮದಾಬಾದ್ ನ ವೆಜಾಲ್ಪುರ್ ಮತಗಟ್ಟೆಯ ಬೂತ್ ನಂ.961 ರಲ್ಲಿ ಅರುಣ್ ಜೇಟ್ಲಿ ಮತ ಚಲಾಯಿಸಿದರು.

ಇವರಲ್ಲದೆ, ಪಟೇಲ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್,  ಗುಜರಾತ್ ಮಾಜಿ ಸಿಎಂ ಆನಂದಿ ಬೆನ್, ಪ್ರಧಾನಿ ಮೋದಿ ತಾಯಿ ಹೀರಾಬೆನ್, ಶಂಕರ್ ಸಿಂಗ್ ವಘೇಲಾ ಮುಂತಾದವರೂ ಮತ ಚಲಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ