ಗುಜರಾತ್ ಎರಡನೇ ಹಂತದ ಚುನಾವಣೆಗೆ ಮತದಾನ ಆರಂಭ
93 ಸ್ಥಾನಗಳಿಗೆ ಒಟ್ಟು 851 ಅಭ್ಯರ್ಥಿಗಳು ಕಣದಲ್ಲಿದ್ದು, 2.22 ಕೋಟಿ ಮತದಾರರಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕೂಡ ಮತದಾನ ಮಾಡಲಿದ್ದಾರೆ.
ಡಿಸೆಂಬರ್ 9ರಂದು 89 ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಮತದಾನದಲ್ಲಿ ಶೇ 68ರಷ್ಟು ಮತದಾನ ನಡೆದಿತ್ತು. ಡಿ.18ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.