ವಿಧಾನಸಭೆಯಲ್ಲಿ ಸೋತ ಅರವಿಂದ್ ಕೇಜ್ರಿವಾಲ್ ಈಗ ಸಂಸತ್ ಸ್ಥಾನದ ಮೇಲೆ ಕಣ್ಣು

Krishnaveni K

ಬುಧವಾರ, 26 ಫೆಬ್ರವರಿ 2025 (14:18 IST)
ನವದೆಹಲಿ: ಇತ್ತೀಚೆಗೆ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಗೆ ಈಗ ಸಂಸತ್ ಗೆ ಎಂಟ್ರಿ ಕೊಡುವ ಯೋಜನೆಯಿದೆ ಎಂದು ಹೇಳಲಾಗುತ್ತಿದೆ.

ಅರವಿಂದ್ ಕೇಜ್ರಿವಾಲ್ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾದ ಬಳಿಕ ಅವರಿಗೆ ಈಗ ಯಾವುದೇ ಅಧಿಕಾರವಿಲ್ಲದಂತಾಗಿದೆ. ಹೀಗಾಗಿ ಮೋದಿ ವಿರುದ್ಧ ಹೋರಾಡಲು ಸಂಸತ್ ಸ್ಥಾನಕ್ಕೇ ಲಗ್ಗೆಯಿಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಲುಧಿಯಾನ ಪಶ್ಚಿಮ ಲೋಕಸಭೆ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು ಈ ಸ್ಥಾನಕ್ಕೆ ಎಎಪಿ ತನ್ನ ಪಕ್ಷದ ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾ ಹೆಸರು ಘೋಷಣೆ ಮಾಡಿದೆ. ಈಗ ಆ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ಎಂಟ್ರಿ ಕೊಡುವ ಲೆಕ್ಕಾಚಾರವಿದೆ ಎನ್ನಲಾಗಿದೆ.

ಆ ಮೂಲಕ ರಾಜ್ಯಸಭೆಗೆ ಕೇಜ್ರಿವಾಲ್ ಪ್ರವೇಶ ಪಡೆಯಲಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಸಂಸತ್ ಸದಸ್ಯರಾಗಿ ಹೊಸ ಇನಿಂಗ್ಸ್ ಆರಂಭಿಸುವ ಸಿದ್ಧತೆಯಲ್ಲಿದ್ದಾರೆ ಎನ್ನುತ್ತಿದೆ ಮೂಲಗಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ