Arvind Kejriwal: ನನ್ನ ಕಾರಿನ ಮೇಲೆ ದಾಳಿ ಮಾಡಿಸಿದ್ದು ಅಮಿತ್ ಶಾ: ಅರವಿಂದ್ ಕೇಜ್ರಿವಾಲ್
ದೆಹಲಿಯಲ್ಲಿ ಈಗ ಚುನಾವಣೆ ಕಾವು ಜೋರಾಗಿದೆ. ಮೊನ್ನೆಯಷ್ಟೇ ಪ್ರಚಾರಕ್ಕೆ ಬರುತ್ತಿದ್ದ ಅರವಿಂದ್ ಕೇಜ್ರಿವಾಲ್ ಕಾರಿನ ಮೇಲೆ ಕಲ್ಲು ಎಸೆದು ದಾಳಿ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಇದು ಬಿಜೆಪಿ ಕಾರ್ಯಕರ್ತರದ್ದೇ ಕೆಲಸ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿತ್ತು.
ಈವತ್ತು ಹರಿ ನಗರ್ ನಲ್ಲಿ ನನ್ನ ಸಾರ್ವಜನಿಕ ಸಭೆಗೆ ವಿರೋಧ ಪಕ್ಷದ ನಾಯಕರು ಬರಲು ಪೊಲೀಸರೇ ಅನುವು ಮಾಡಿಕೊಟ್ಟಿದ್ದಾರೆ. ಇದೆಲ್ಲವೂ ಅಮಿತ್ ಶಾ ಅಣತಿಯಂತೇ ನಡೆಯುತ್ತಿದೆ. ಅಮಿತ್ ಶಾ ದೆಹಲಿ ಪೊಲೀಸರನ್ನು ಬಿಜೆಪಿಯ ಕಾರ್ಯಕರ್ತರಂತೆ ಮಾಡಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿರುವ ಅವರು, ಇಷ್ಟೆಲ್ಲಾ ನಡೆಯುತ್ತಿದ್ದರೂ ಚುನಾವಣಾ ಆಯೋಗ ಮಾತ್ರ ಇಂತಹವರ ಮೇಲೆ ಕ್ರಮ ಕೈಗೊಳ್ಳದೇ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದ್ದಾರೆ.