ಮೋದಿ ಸರಕಾರದ 2ವರ್ಷದ ಸಾಧನೆ: ಬಿಜೆಪಿ ಮಿತ್ರಪಕ್ಷವಾದ ಶಿವಸೇನೆಯಿಂದಲೇ ಲೇವಡಿ

ಗುರುವಾರ, 26 ಮೇ 2016 (15:02 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಎರಡು ವರ್ಷಗಳ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆ, ಮೋದಿ ಸರಕಾರ ಹಲವು ವಿಷಯಗಳಲ್ಲಿ ವೈಫಲ್ಯತೆಗಳನ್ನು ಕಂಡಿದೆ ಎಂದು ಲೇವಡಿ ಮಾಡಿದೆ.
 
ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ, ಹಣದುಬ್ಬರ, ಗಡಿಭಯೋತ್ಪಾದನೆ ಮತ್ತು ಇತ್ತಿಚೆಗೆ ಘೋಷಿಸಲಾದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದೆ.
 
ಪ್ರಧಾನಿ ಮೋದಿ ನಿರಂತರ ವಿದೇಶ ಪ್ರವಾಸಗಳ ವಿರುದ್ಧವು ಕಿಡಿಕಾರಿದ ಶಿವಸೇನೆ, ಮೋದಿ ತಮ್ಮ ನಿವಾಸ ಭಾರತದಲ್ಲಿದೆಯೇ ಅಥವಾ ವಿದೇಶದಲ್ಲಿಯೇ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಗುಡುಗಿದೆ.
 
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಬೃಹತ್ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿಲ್ಲ. ಆದರೆ, ದರ ಏರಿಕೆ, ಮತ್ತು ಕೃಷಿ ಕ್ಷೇತ್ರದ ದುಸ್ಥಿತಿಯಿಂದಾಗಿ ಕಂಗಾಲಾಗಿರುವ ಜನತೆಗೆ ನೆಮ್ಮದಿ ನೀಡುವ ಹಣದುಬ್ಬರವನ್ನು ನಿಯಂತ್ರಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದರು. 
 
ಮೋದಿ ಸರಕಾರ ಒಂದರ ನಂತರ ಮತ್ತೊಂದು ಯೋಜನೆಗಳನ್ನು ಘೋಷಿಸಿದೆ. ಆದರೆ, ಮೋದಿ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿಯಿಲ್ಲ. ಹಿಂದಿನ ಸರಕಾರ ಜಾರಿಗೆ ತಂದ ಯೋಜನೆಗಳನ್ನು ಹೊಸ ಹೆರಿನಲ್ಲಿ ಜಾರಿಗೊಳಿಸುವದು ಯಾವ ಸಾಧನೆ ಎಂದು ಶಿವಸೇನೆ ಪ್ರಶ್ನಿಸಿದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ