ನಾಯಿಯೊಂದಿಗೆ ಟಾಯ್ಲೆಟ್ ನಲ್ಲಿ ಕಾಮ ತೃಷೆ ತೀರಿಸಿದ ಕಾಮುಕ!
ಶುಕ್ರವಾರ, 15 ಸೆಪ್ಟಂಬರ್ 2017 (10:12 IST)
ಮುಂಬೈ: ಪ್ರತಿ ನಿತ್ಯ ಹಲವು ಅತ್ಯಾಚಾರ ಪ್ರಕರಣಗಳ ಬಗ್ಗೆ ಓದುತ್ತಿರುತ್ತೇವೆ. ಆದರೆ ಮುಂಬೈಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಆಟೋ ಚಾಲಕನೊಬ್ಬ ನಾಯಿ ಮೇಲೆ ತನ್ನ ಕಾಮ ತೃಷೆ ತೀರಿಸಿಕೊಂಡಿದ್ದಾನೆ.
ರಾಮ್ ನರೇಶ್ ಎಂಬ ಆರೋಪಿ ಟಾಯ್ಲೆಟ್ ಒಳಗೆ ಮೂರು ಬಾರಿ ನಾಯಿ ಮೇಲೆ ಅತ್ಯಾಚಾರವೆಸಗಿದ್ದಾನೆ. ನಾಯಿಯೊಂದಿಗೆ ಟಾಯ್ಲೆಟ್ ಒಳಗೆ ನುಗ್ಗುತ್ತಿದ್ದ ಈತ ಆರರಿಂದ ಏಳು ನಿಮಿಷ ಹೊರಗೇ ಬರುತ್ತಿರಲಿಲ್ಲ. ಸಂಶಯಗೊಂಡ ಸ್ಥಳೀಯರು ಸಿಸಿಟಿವಿ ಫೂಟೇಜ್ ಗಮನಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ನಾಯಿಯನ್ನು ಪರೀಕ್ಷೆಗೊಳಪಡಿಸಿದಾಗ ಕೃತ್ಯ ದೃಢಪಟ್ಟಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.