ನೊಯ್ಡಾದಲ್ಲಿ ಎಕ್ಸಿಸ್ ಬ್ಯಾಂಕ್ ಮೇಲೆ ದಾಳಿ, ನಕಲಿ ಖಾತೆಗಳಲ್ಲಿ 60ಕೋಟಿ ಪತ್ತೆ

ಗುರುವಾರ, 15 ಡಿಸೆಂಬರ್ 2016 (16:44 IST)
500 ಮತ್ತು 1,000 ರೂಪಾಯಿ ಮುಖಬೆಲೆ ನೋಟುಗಳನ್ನು ನಿಷೇಧಿಸಿದ ಬಳಿಕ ಆದಾಯ ತೆರಿಗೆ ಅಧಿಕಾರಿಗಳು ಕಪ್ಪುಹಣವನ್ನು ವಶಪಡಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಬುಧವಾರ ತಡರಾತ್ರಿ ನೊಯ್ಡಾದಲ್ಲಿನ ಎಕ್ಸಿಸ್ ಬ್ಯಾಂಕ್ ಶಾಖೆಯೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ನಕಲಿ ಖಾತೆಗಳಿಂದ ಬರೊಬ್ಬರಿ 80ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ. 
ಸೆಕ್ಟರ್ ನೊಯ್ಡಾದಲ್ಲಿನ ಎಕ್ಸಿಸ್ ಬ್ಯಾಂಕ್ ಮೇಲೆ ದಾಳಿ ನಡೆಸಲಾಗಿತ್ತು. ಮೂಲಗಳ ಪ್ರಕಾರ ಎಲ್ಲ 20 ನಕಲಿ ಖಾತೆಗಳನ್ನು ಬಡವರ ಹೆಸರಿನಲ್ಲಿ, ವಿಶೇಷವಾಗಿ ಕಪ್ಪುಹಣವನ್ನು ಕಾಪಾಡಿಕೊಳ್ಳಲು ಸೃಷ್ಟಿಸಲಾಗಿತ್ತು.
 
ಇದಕ್ಕಿಂತ ಮೊದಲು ಅಂದರೆ ನವೆಂಬರ್ 25 ರಂದು ದೆಹಲಿಯ ಎಕ್ಸಿಸ್ ಬ್ಯಾಂಕ್ ಶಾಖೆಯೊಂದರ ಮೇಲೆ ದಾಳಿ ಮಾಡಲಾಗಿತ್ತು. 3.5 ಕೋಟಿ ಹೊಸ ನೋಟುಗಳನ್ನು ಹೊಂದಿರುವ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ ಮೇಲೆ ಈ ದಾಳಿಯನ್ನು ನಡೆಸಲಾಗಿತ್ತು.
 
ಈ ಎರಡು ದಾಳಿಗೆ ಸಂಬಂಧಿಸಿದಂತೆ ಎಕ್ಸಿಸ್ ಬ್ಯಾಂಕ್ ತನ್ನ ಒಟ್ಟು 19 ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ