ಅಯೋಧ್ಯೆಯಲ್ಲಿ ಲಕ್ಷ ದೀಪೋತ್ಸವ!

ಗುರುವಾರ, 4 ನವೆಂಬರ್ 2021 (07:37 IST)
ಪ್ರತಿವರ್ಷ ದೀಪಗಳ ಹಬ್ಬ ದೀಪಾವಳಿ ಸಂದರ್ಭದಲ್ಲಿ ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಲಕ್ಷ ದೀಪೋತ್ಸವ ಆಚರಿಸುತ್ತಿದೆ.
ಗಮನಿಸಬೇಕಾದ ಸಂಗತಿಯೇನೆಂದರೆ, ಪ್ರತಿ ವರ್ಷದ ದೀಪಾವಳಿಯಲ್ಲಿ ಹಿಂದಿನ ವರ್ಷಕ್ಕಿಂತ ಹೆಚ್ಚು ಹಣತೆಗಳನ್ನು ನೂತನ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುತ್ತಿದೆ. ಈ ದೀಪಾವಳಿಯು ಸರ್ಕಾರದ 5 ವರ್ಷ ಅವಧಿಯ ಕೊನೆಯ ದೀಪಾವಳಿಯಾಗಿದೆ. ನಮಗೆಲ್ಲ ಗೊತ್ತಿರುವ ಹಾಗೆ 2022 ರಲ್ಲಿ ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆ ನಡೆಯಲಿದೆ.
ಕಳೆದ ವರ್ಷ ಯೋಗಿ ಅವರ ಸರ್ಕಾರ ರಾಮ್ ಕಿ ಪೈಡಿ ಘಾಟ್ನಲ್ಲಿ 6,06,569 ಹಣತೆಗಳನ್ನು ಬೆಳಗಿ ಹೊಸ ದಾಖಲೆಯನ್ನು ನಿರ್ಮಿಸಿತ್ತು. ಅದಕ್ಕೂ ಒಂದು ವರ್ಷ ಮೊದಲು ಅಂದರೆ 2019ರಲ್ಲಿ 4,10,000 ದೀಪಗಳನ್ನು ಹಚ್ಚಿದ್ದು ಸಹ ಆಗಿನ ದಾಖಲೆಯಾಗಿತ್ತು. ನಮಗೆ ಲಭ್ಯವಾಗಿರುವ ಮೂಲಗಳ ಪ್ರಕಾರ ಈ ಬಾರಿ 10 ಲಕ್ಷಕ್ಕಿಂತಲೂ ಹೆಚ್ಚು ದೀಪಗಳನ್ನು ಬೆಳಗಿಸಲಾಗುವುದು.
ಅಯೋಧ್ಯೆಯ ರಾಮ ಮನೋಹರ ಲೋಹಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು 14,000 ಸ್ವಯಂ ಸೇವಕರು ದೀಪ ಹಚ್ಚುವ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ