ಹನಿಮೂನ್‌ಗೆ ಹೋಗಿದ್ದ ವೇಳೆ ಇಂದೋರ್ ಉದ್ಯಮಿ ರಾಜಾ ರಘುವಂಶಿ ಪ್ರಕರಣದ ಆರೋಪಿ ಪತ್ನಿ ಸೋನಂ ರಘುವಂಶಿ ಜೈಲು ಪಾಲಾಗಿದ್ದಾಳೆ.
ಹನಿಮೂನ್‌ಗೆ ತೆರಳಿದ್ದ ರಾಜಾ ರಘುವಂಶಿ ಕೆಲ ದಿನ ನಾಪತ್ತೆಯಾಗಿ ಬಳಿಕ ಶವವಾಗಿ ಪತ್ತೆಯಾಗಿದ್ದರು. ಪ್ರೀತಿಸಿದಿ ಯುವಕನನ್ನು ಕೈಹಿಡಿಯುವ ಉದ್ದೇಶದಿಂದ ಸೋನಂ ಇತರರ ಜತೆ ಸೇರಿಕೊಂಡು ಪತಿಯನ್ನು ಮುಗಿಸಿದ್ದಳು. ಈ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದ್ದು, 'ಪ್ರೇಮಿ' ರಾಜ್ ಕುಶ್ವಾಹಾ ಮತ್ತು ಇತರ ಮೂವರೊಂದಿಗೆ ಆಕೆಯನ್ನು ಬಂಧಿಸಲಾಯಿತು.
ಪತಿಯನ್ನು ಕೊಂದ ಸಂಬಂಧ ಸೋನಂ ಜೈಲು ಸೇರಿ ಒಂದು ತಿಂಗಳಾಗಿದ್ದು, ಆದರೆ ಇದುವರೆಗೆ ಆಕೆಯಲ್ಲಿ ಯಾವುದೇ ಪಶ್ಚಾತ್ತಾಪದ ಭಾವ ಕಂಡು ಬಂದಿಲ್ಲ ಜೈಲಿನ ಮೂಲಗಳಿಂದ ತಿಳಿದುಬಂದಿದೆ.
ಅದಲ್ಲದೆ ಆಕೆ ಜೈಲು ಸೇರಿದ್ಮೇಲೆ ಕುಟುಂಬದ ಯಾರೊಬ್ಬರು ಆಕೆಯನ್ನು ಸಂಪರ್ಕ ಮಾಡಿಲ್ಲ.
ಆಕೆ ಜೈಲಿನ ದಿನಚರಿಕೆ ಹೊಂದಿಕೊಂಡು, ಜೈಲು ಕೈಪಿಡಿಯ ಪ್ರಕಾರ ದಿನಚರಿಯನ್ನು ನಡೆಸುತ್ತಿದ್ದಾಳೆ. ಜೈಲಿನ ನಿಯಮ ಪ್ರಕಾರ ಬೆಳಗ್ಗೆ ಎದ್ದು, ಸಹ ಕೈದಿಗಳೊಂದಿಗೆ ಚೆನ್ನಾಗಿ ಹೊಂದಿಕೊಂಡು ನಡೆಯುತ್ತಿದ್ದಾಳೆ ಎಂದು ವರದಿಯಾಗಿದೆ.