ವೈದ್ಯರ ಸಹಾಯಕ್ಕೆ ಬಂದ ಬಾಹುಬಲಿ!
40 ವರ್ಷದ ವಿನಯಕುಮಾರಿ ಎಂಬ ಮಹಿಳೆಗೆ ಬ್ರೈನ್ ಟ್ಯೂಮರ್ ಇತ್ತು. ಇದಕ್ಕೆ ಶಸ್ತ್ರಚಿಕಿತ್ಸೆ ಮಾಡುವಾಗ ರೋಗಿ ಪ್ರಜ್ಞಾವಸ್ಥೆಯಲ್ಲೇ ಇರಬೇಕು. ಆದರೆ ರೋಗಿ ಭಯಪಡದಂತೆ ನೋಡಿಕೊಳ್ಳಲು ವೈದ್ಯರು ಆಕೆಗೆ ಬಾಹುಬಲಿ ಸಿನಿಮಾ ಹಾಕಿಕೊಟ್ಟರು. ಆಕೆ ಸಿನಿಮಾ ನೋಡುತ್ತಿದ್ದರೆ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮುಗಿಸಿದ್ದಾರೆ!