ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗಿನ ವಿಡಿಯೋ ಶಶಿಕಲಾ ಬಳಿಯಿದೆ: ದಿನಕರನ್ ಬಾಂಬ್

ಸೋಮವಾರ, 25 ಸೆಪ್ಟಂಬರ್ 2017 (17:11 IST)
ತಮಿಳುನಾಡಿನ ದಿವಂಗತ ಮಾಜಿ ಸಿಎಂ ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ತೆಗೆದ ವಿಡಿಯೋ ವಿ.ಕೆ.ಶಶಿಕಲಾ ಬಳಿಯಿದೆ ಎಂದು ಎಐಎಡಿಎಂಕೆ ಉಚ್ಚಾಟಿತ ನಾಯಕ ಟಿಟಿವಿ ದಿನಕರನ್ ಹೇಳಿದ್ದಾರೆ.
ಜಯಲಲಿತಾ ಸಾವಿನ ಬಗ್ಗೆ ದಿನಕ್ಕೊಂದು ಉಹಾಪೋಹಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ದಿನಕರನ್ ಸ್ಪಷ್ಟನೆ ನೀಡಿದ್ದಾರೆ.
 
ಜಯಲಲಿತಾ ನೈಟಿ ಧರಿಸಿ ಟೆಲಿವಿಜನ್ ವೀಕ್ಷಿಸುತ್ತಿರುವ ವಿಡಿಯೋವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಡ. ಆ ವಿಡಿಯೋವನ್ನು ನಿನ್ನ ಬಳಿಯೇ ಇಟ್ಟುಕೊಳ್ಳಬೇಕು ಎಂದು ಜಯಲಲಿತಾ ಹೇಳಿದ ನಂತರ, ಶಶಿಕಲಾ ವಿಡಿಯೋ ತೆಗೆದುಕೊಂಡು ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. 
 
ಆಸ್ಪತ್ರೆಯಲ್ಲಿ ಜಯಲಲಿತಾ ಟೆಲಿವಿಜನ್ ನೋಡುತ್ತಿರುವ ವಿಡಿಯೋವನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.
 
ಜಯಲಲಿತಾ ಸಾವಿನ ಬಗ್ಗೆ ಯಾವುದೇ ತನಿಖೆಗೆ ಸಿದ್ದವಿದ್ದೇವೆ. ಬೇಕಾದ್ರೆ ಇಂಟರ್‌ಪೋಲ್‌ನಿಂದ ಬೇಕಾದ್ರೂ ತನಿಖೆ ನಡೆಸಿದರೂ ನಮಗೆ ಅಭ್ಯಂತರವಿಲ್ಲ. ನಾನು ಮತ್ತು ಶಶಿಕಲಾ ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
 
ಇತ್ತೀಚೆಗೆ, ಅರಣ್ಯ ಖಾತೆ ಸಚಿವರಾದ ದಿಂಡಿಗುಲ್ ಶ್ರೀನಿವಾಸನ್ ಹೇಳಿಕೆ ನೀಡಿ, ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ಅವರ ಆರೋಗ್ಯದ ಬಗ್ಗೆ ನಾವೆಲ್ಲರೂ ಜನತೆಗೆ ಸುಳ್ಳು ಹೇಳಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದರು.
 
ಶ್ರೀನಿವಾಸನ್ ತಪ್ಪೊಪ್ಪಿಗೆಯಿಂದ ಆಕ್ರೋಶಗೊಂಡ ವಿಪಕ್ಷಗಳು ಜಯಲಲಿತಾ ಸಾವಿನ ಹಿಂದಿನ ರಹಸ್ಯದ ಬಗ್ಗೆ ಕೂಡಲೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿವೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ