ರಾಷ್ಟ್ರಪತಿ ಕಾರು ಬರುತ್ತಿದ್ದರೂ ಆಂಬ್ಯುಲೆನ್ಸ್`ಗೆ ಜಾಗ ಕೊಟ್ಟ ಬೆಂಗಳೂರು ಪೊಲೀಸರು

ಮಂಗಳವಾರ, 20 ಜೂನ್ 2017 (18:45 IST)
ರಾಷ್ಟ್ರಪತಿ ಕಾರು ಬರುತ್ತಿದ್ದರು ಪೊಲೀಸ್ ಅಧಿಕಾರಿಯೊಬ್ಬ ಆಂಬ್ಯುಲೆನ್ಸ್ ತೆರಳಲು ಅನುವು ಮಾಡಿಕೊಟ್ಟು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಸಬ್ ಇನ್ಸ್`ಪೆಕ್ಟರ್ ಎಂ.ಎಲ್. ನಿಜಲಿಂಗಪ್ಪ, ಪೇದೆ ವಿಶ್ವನಾಥ್ ತಮ್ಮ ಸಮಯ ಪ್ರಜ್ಞೆಯಿಂದ ದೇಶದ ಗಮನ ಸೆಳೆದಿದ್ದಾರೆ.
 

ಶನಿವಾರ ರಾಷ್ಟ್ರಪತಿಗಳ ಭೇಟಿ ಸಂದರ್ಭ ಇವರಿಬ್ಬರು ಟ್ರನಿಟಿ ಸರ್ಕಲ್`ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕಾರು ಎಚ್ಎಎಲ್ ಏರ್ ಪೋರ್ಟ್`ನಿಂದ ಆಗಮಿಸುತ್ತಿದ್ದು, ಈ ಸಂದರ್ಭ ಒಂದು ಆಂಬ್ಯುಲೆನ್ಸ್ ಸಹ ಮತ್ತೊಂದು ರಸ್ತೆಯಿಂದ ಬಂದಿದೆ. ನೂರಾರು ಮೀಟರ್ ದೂರದಲ್ಲಿದ್ದ ರಾಷ್ಟ್ರಪತಿ ಕಾರು ಬಂದೇಬಿಡುತ್ತಿತ್ತು. ಅಷ್ಟರಲ್ಲಿ ತಮ್ಮ ವಿವೇಚನೆ ಬಳಸಿದ ಎಸ್`ಐ ಆಂಬ್ಯುಲೆನ್ಸ್ ತೆರಳಲು ಜಾಗ ಬಿಟ್ಟಿದ್ದಾರೆ. ಕೆಲವೇ ನಿಮಿಷಗಳಲ್ಲಿ ರಾಷ್ಟ್ರಪತಿ ಕಾರು ಸಹ ಸಾಗಿದೆ ಯಾವುದೇ ತಡೆ ಒಡ್ಡಿಲ್ಲ.

ಸಮಯೋಚಿತವಾಗಿ ಯೋಚಿಸಿ ಎಸ್ ಐ ಕೈಗೊಂಡ ಈ ನಿರ್ಧಾರಕ್ಕೆ  ಪ್ರಶಂಸೆ ವ್ಯಕ್ತವಾಗಿದೆ. ರಾಷ್ಟ್ರಪತಿಗಳ ಕಾರು ಕೆಲ ನೂರು ಮೀಟರ್`ಗುಕ್ಷಣ ತುರ್ತು ನಿರ್ಧಾರ ಕೈಗೊಂಡು ಆಂಬ್ಯುಲೆನ್ಸ್ ತೆರಳಲು ಬಿಟ್ಟೆವು. ವಿವಿಐಪಿ ನಿಯೋಗವನ್ನ ತಡೆಯಲಿಲ್ಲ ಎಂದು ಎಸ್ ಐ ತಿಳಿಸಿರುವುದಾಗಿ ಎನ್`ಡಿಟಿವಿ ವರದಿ ಮಾಡಿದೆ.

ವೆಬ್ದುನಿಯಾವನ್ನು ಓದಿ