Murshidabad Violence: ಮುರ್ಷಿದಾಬಾದ್ ಹಿಂಸಾಚಾರ, ಪಶ್ಚಿಮ ಬಂಗಾಲ ವಕ್ಫ್ ಪ್ರತಿಭಟನೆ, ಬಾಂಗ್ಲಾದೇಶೀ ವಲಸಿಗರ ಕೈವಾಡ ಶಂಕೆ

Krishnaveni K

ಮಂಗಳವಾರ, 15 ಏಪ್ರಿಲ್ 2025 (16:36 IST)
ಕೋಲ್ಕತ್ತಾ: ಇತ್ತೀಚೆಗೆ ಪಶ್ಚಿಮ ಬಂಗಾಲದ ಮುರ್ಷಿದಾಬಾದ್ ನಲ್ಲಿ ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಇದೀಗ ಇಲ್ಲಿ ನಡೆದ ಹಿಂಸಾಚಾರದ ಹಿಂದೆ ಬಾಂಗ್ಲಾದೇಶೀ ವಲಸಿಗರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ನಡೆದ ಪ್ರತಿಭಟನೆ ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಮೇಲಿನ ಹಿಂಸಾಚಾರವನ್ನೇ ಹೋಲುತ್ತಿತ್ತು. ಇದೀಗ ಇಲ್ಲಿ ನಡೆದ ಹಿಂಸಾಚಾರದ ಹಿಂದೆಯೂ ಬಾಂಗ್ಲಾದೇಶೀ ಪ್ರಜೆಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಮುರ್ಷಿದಾಬಾದ್ ನಲ್ಲಿ ಹಿಂಸಾಚಾರದ ಬಳಿಕ ಕೇಂದ್ರ ಗೃಹ ಇಲಾಖೆ ಅರೆಸೇನಾ ಪಡೆಗಳನ್ನು ನಿಯೋಜಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿತ್ತು. ಇದೀಗ ಘಟನೆ ಬಗ್ಗೆ ಕೇಂದ್ರ ಗೃಹಸಚಿವಾಲಯ ರಾಜ್ಯ ಸರ್ಕಾರಕ್ಕೆ ವಿವರಣೆ ಕೋರಿದೆ.

ಈ ಘಟನೆಯನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ತನಿಖೆಗೆ ಮುಂದಾಗಿದೆ. ಇನ್ನೊಂದೆಡೆ ಕೆಲವು ಸೋಷಿಯಲ್ ಮೀಡಿಯಾ ಪೋಸ್ಟ್ ಗಳೂ ಘಟನೆಯಲ್ಲಿ ಬಾಂಗ್ಲಾದೇಶೀ ಪ್ರಜೆಗಳ ಕೈವಾಡವಿರುವುದಾಗಿ ಸಂಶಯ ವ್ಯಕ್ತಪಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ