Viral Video: ವಕ್ಫ್ ಹಿಂಸಾಚಾರದಿಂದ ಗ್ರಾಮ ಬಿಟ್ಟು ಓಡುತ್ತಿರುವ ಹಿಂದೂಗಳು: ಇದು ಭಾರತ, ಬಾಂಗ್ಲಾ ಅಲ್ಲ
ಪಶ್ಚಿಮ ಬಂಗಾಲದ ಮುರ್ಷಿದಾಬಾದ್ ನಲ್ಲಿ ಹಿಂದೂಗಳು ಗುಂಪು ಗುಂಪಾಗಿ ತೆರಳುತ್ತಿರುವ ಮತ್ತು ನಿರಾಶ್ರಿತರಾಗಿ ಒಂದು ಕಡೆ ಗುಂಪು ಸೇರಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನು ನೋಡಿ ಇದೇನು ಭಾರತವೋ, ಬಾಂಗ್ಲಾದೇಶವೋ ಎಂದು ಜನ ಅನುಮಾನ ಪಡುವಂತಾಗಿದೆ. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ ನಡೆದಿತ್ತು. ಈಗ ಅದೇ ದೃಶ್ಯ ಭಾರತದಲ್ಲೇ ಕಂಡುಬರುತ್ತಿರುವುದು ವಿಪರ್ಯಾಸವಾಗಿದೆ.
ಹಿಂದೂಗಳ ವಾಹನಗಳನ್ನು ಜಖಂಗೊಳಿಸುವುದು, ಸರ್ಕಾರೀ ಕಚೇರಿಗಳ ಮೇಲೆ ಕಲ್ಲೆಸೆದು ದಾಂಧಲೆ ನಡೆಸಲಾಗುತ್ತಿದೆ. ಇದಕ್ಕೆಲ್ಲಾ ಆಡಳಿತಾರೂಢ ಟಿಎಂಸಿಯೇ ಬೆಂಬಲ ನೀಡಿದೆ ಎಂದು ಬಿಜೆಪಿ ಆರೋಪಿಸಿದೆ.