ತಲೆಗೆ ಇಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ!

ಗುರುವಾರ, 27 ಅಕ್ಟೋಬರ್ 2022 (07:37 IST)
ಲಕ್ನೋ : ಕಾರು ಪಾರ್ಕ್ ಮಾಡಿದ ವಿಚಾರಕ್ಕೆ ಜಗಳ ನಡೆದು, ಅದರಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬನ ತಲೆಗೆ ಇಟ್ಟಿಗೆಯಿಂದ ಹೊಡೆದು ಹತ್ಯೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.
 
ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ವರುಣ್ ಎಂದು ಗುರುತಿಸಲಾಗಿದೆ. ಆತ ದೆಹಲಿಯ ನಿವೃತ್ತ ಪೊಲೀಸ್ ಅಧಿಕಾರಿಯ ಮಗ ಎಂಬುದೂ ತಿಳಿದುಬಂದಿದೆ.

ಘಟನೆಯ ಭಯಾನಕ ವೀಡಿಯೋವನ್ನು ಸ್ಥಳೀಯರು ರೆಕಾರ್ಡ್ ಮಾಡಿದ್ದು, ಅದರಲ್ಲಿ ವರುಣ್ಗೆ 4-5 ಜನರ ಗುಂಪು ಅಮಾನುಷವಾಗಿ ಥಳಿಸುವುದು ಕಂಡುಬಂದಿದೆ.

ವರದಿಗಳ ಪ್ರಕಾರ ಕಳೆದ ರಾತ್ರಿ ವರುಣ್ ಗಾಜಿಯಾಬಾದ್ನ ಉಪಾಹಾರ ಗೃಹದ ಹೊರಗಡೆ ತನ್ನ ಕಾರನ್ನು ನಿಲ್ಲಿಸಿದ್ದ. ಆತ ಪಕ್ಕದ ಕಾರಿನ ಬಾಗಿಲನ್ನು ತೆರೆಯಲು ಸಾಧ್ಯವಾಗದಷ್ಟು ಹತ್ತಿರದಲ್ಲಿ ನಿಲ್ಲಿಸಿದ್ದಾನೆ ಎಂದು ಪಕ್ಕದ ಕಾರಿನ ಮಾಲೀಕ ವರುಣ್ನೊಂದಿಗೆ ವಾಗ್ವಾದ ಪ್ರಾರಂಭಿಸಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ