ತೆರಿಗೆ ಸಂಗ್ರಹಣೆಗೆ ಬಿಬಿಎಂಪಿ ಹೊಸ ಪ್ಲಾನ್

ಶುಕ್ರವಾರ, 1 ಜುಲೈ 2022 (14:05 IST)
ಬೆಂಗಳೂರಿನಲ್ಲಿರುವ ಬಹುಪಾಲು ಪ್ರತಿಷ್ಠಿತ ಕಂಪನಿಗಳು, ಮಾಲ್‌, ಆಸ್ಪತ್ರೆಗಳು ಟ್ಯಾಕ್ಸ್ ಕಟ್ಟೋದಕ್ಕೆ ಹಿಂದೇಟು ಹಾಕಿದೆ ಇದರ ವಿರುದ್ಧ ಈಗಾಗಲೇ ಬಿಬಿಎಂಪಿ ನೋಟಿಸ್‌, ತಮಟೆ ಚಳುವಳಿ, ಒತ್ತಡ ಹೀಗೆ ಅನೇಕ ರೀತಿಯಲ್ಲಿ ಕ್ರಮಗಳನ್ನು ಕೈಗೊಂಡಿದೆ.
ಐಟಿ ಇಲಾಖೆಯ ಸಲಹೆ ಮೇರೆಗೆ ನೇರವಾಗಿ ಬ್ಯಾಂಕ್‌ ಅಕೌಂಟ್‌ ಲಿಂಕ್‌ ಮೂಲಕ ʻಡಿಜಿಟಲ್‌ ಮಾರ್ಗದ ಮೂಲಕ ವಸೂಲಾತಿಗೆ ಬಿಬಿಎಂಪಿ ಮುಂದಾಗಿದೆ. ಯಾರು ತೆರಿಗೆ ಕಟ್ಟೊದಕ್ಕೆ ಹಿಂದೇಟು ಹಾಕುತ್ತಾರೋ ಅವರಿಗೆ ಇದೀಗ ಮತ್ತೊಂದು ಶಾಕ್‌ ಎದುರಾಗಿದ್ದಂತೂ ನಿಜ. ನಿಮ್ಮ ಇಎಂಐ ಹೇಗೆ ಅಕೌಂಟ್‌ನಿಂದ ಹಣ ಕಟ್‌ ಅಗುತ್ತದೆಯೇ ಅದೇ ರೀತಿಯಲ್ಲಿ ಬಡ್ಡಿ ಸಮೇತ ವಸೂಲಾತಿ ಮಾಡಲು ಬಿಬಿಎಂಪಿ ಅಧಿಕಾರಿಗಳು ಮುಂದಾಗುತ್ತಾರೆ.
 
ಬಿಬಿಎಂಪಿಯ ಈ ಹೊಸ ಪ್ರಯೋಗದಿಂದ ಪ್ರತಿಷ್ಠಿತ ಕಂಪನಿಗಳಿಂದ ಈ ರೀತಿಯಾದ್ರೂ ತೆರೆಗೆ ವಸೂಲತಿ ಮಾಡಲಾಗುತ್ತದೆಯೋ ಇಲ್ಲವೇ ಅನ್ನೋದನ್ನು ಕಾದು ನೋಡಬೇಕಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ