ಅಮರಾವತಿ : ಮೊಬೈಲ್ ಎಂಬ ಮಾಯಾಜಾಲ ಮನುಷ್ಯನನ್ನು ಆವರಿಸಿಬಿಟ್ಟಿದೆ.
ಮೊಬೈಲ್ ಇಲ್ಲದ ಜೀವನನ್ನು ಊಹಿಸಿಕೊಳ್ಳೋದಕ್ಕೂ ಸಾಧ್ಯವಾಗ್ತಿಲ್ಲ. ದಿನಸಿ ಅಂಗಡಿಗೆ ಹೋದರೂ, ಸಣ್ಣ ಮಳಿಗೆಯಲ್ಲಿ ಟೀ ಕುಡಿದರೂ ಹಣ ಪಾವತಿ ಮಾಡೋದಕ್ಕೂ ಮೊಬೈಲ್ ಹಿಡಿದುಕೊಳ್ಳುವಷ್ಟೂ ಅಡಿಕ್ಷನ್ಗೆ ಒಳಗಾಗಿದ್ದೇವೆ.
ಹಾಗೆಯೇ ಇಲ್ಲೊಬ್ಬರು ಶಿಕ್ಷಕರು ವಾಟ್ಸಾಪ್ನಲ್ಲಿ ಬಂದ ಸಂದೇಶಗಳನ್ನೆಲ್ಲಾ ಸ್ವೀಕರಿಸುತ್ತಾ 21 ಲಕ್ಷ ರೂಪಾಯಿಗಳನ್ನ ಕಳೆದುಕೊಂಡಿದ್ದಾರೆ.
ಅಪರಿಚಿತ ನಂಬರ್ನಿಂದ ಬಂದ ವಾಟ್ಸಾಪ್ ಮೆಸೇಜ್ನಿಂದ ಶಿಕ್ಷಿಯೊಬ್ಬರು 21 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಈಲ್ಲಿನ ಅನ್ನಮಯ್ಯ ಜಿಲ್ಲೆಯ ನಿವಾಸಿಯಾಗಿರುವ ಶಿಕ್ಷಕಿ ವರಲಕ್ಷಿ ಅವರೇ 21 ಲಕ್ಷ ಕಳೆದುಕೊಂಡಿರುವವರು. ತನ್ನ ಮೊಬೈಲ್ಗೆ ಬಂದ ಒಂದೇ ಒಂದು ವಾಟ್ಸಾಪ್ ಲಿಂಕ್ ಸಂದೇಶದಿಂದ ಹಣ ಕಳೆದುಕೊಂಡು ಬಳಿಕ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.