ಕತ್ತಲಲ್ಲಿ ಸ್ಮಾರ್ಟ್ ಫೋನ್ ಬಳಸುವ ಮುನ್ನ ಎಚ್ಚರ!
30 ವರ್ಷದ ಮಂಜು ಒಂದೂವರೆ ವರ್ಷಗಳಿಂದ ದೃಷ್ಟಿ ದೋಷದ ಲಕ್ಷಣಗಳನ್ನು ಹೊಂದಿದ್ದರು. ಮಂಜು ಕತ್ತಲೆಯಲ್ಲಿ ತನ್ನ ಸ್ಮಾರ್ಟ್ಫೋನ್ ಅನ್ನು ಅತಿಯಾಗಿ ಬಳಸುತ್ತಿದ್ದಳು. ಇದರಿಂದಾಗಿ ಆಕೆ ದೃಷ್ಟಿ ಕಳೆದುಕೊಂಡಿದ್ದಳು.
ತನ್ನ ಮಗುವನ್ನು ನೋಡಿಕೊಳ್ಳುವ ಸಲುವಾಗಿ ಆಕೆ ಬ್ಯೂಟಿಷಿಯನ್ ಕೆಲಸವನ್ನು ತೊರೆದಿದ್ದಾಳೆ. ನಂತರ ತನ್ನ ಮೊಬೈಲ್ನಲ್ಲೇ ಗಂಟೆಗಟ್ಟಲೆ ಕಳೆಯಲು ಪ್ರಾರಂಭಿಸಿದಳು. ಅದಾದ ಬಳಿಕ ಆಕೆಗೆ ಈ ರೋಗಲಕ್ಷಣಗಳು ಪ್ರಾರಂಭವಾದವು.
ಅದಾದ ಬಳಿಕ ಆಕೆ ವೈದ್ಯರನ್ನು ಸಂಪರ್ಕಿಸಿದಳು. ಅ ಸಂದರ್ಭದಲ್ಲಿ ಆ ವೈದ್ಯರು ಯಾವುದೇ ಮಾತ್ರೆಯನ್ನು ನೀಡಿಲ್ಲ. ಜೊತೆಗೆ ಚಿಕಿತ್ಸೆಯನ್ನು ನೀಡಲಿಲ್ಲ. ಬದಲಾಗಿ ಮೊಬೈಲ್ ಬಳಕೆ ಕಡಿಮೆ ಮಾಡಲು ತಿಳಿಸಿದರು. ಇದಾದ ಬಳಿಕ ಆಕೆ ಸಂಪೂರ್ಣವಾಗಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿದ್ದರಿಂದ ಒಂದೂವರೆ ವರ್ಷದ ಬಳಿಕ ಆಕೆಯ ಕಣ್ಣು ಸಹಜ ಸ್ಥಿತಿಗೆ ಮರಳಿತು.