ಮೌನವಾಗಿರದಿದ್ರೆ ಕಪಾಳಮೋಕ್ಷ ಮಾಡ್ತೇನೆ: ಜನರಿಗೆ ಗೃಹ ಸಚಿವ ರಾಜನಾಥ್ ಸಿಂಗ್ ಬೆದರಿಕೆ

ಶುಕ್ರವಾರ, 10 ಜೂನ್ 2016 (12:02 IST)
ಬಿಜೆಪಿ ಪಕ್ಷ ಆಯೋಜಿಸಿದ ಸಭೆಯಲ್ಲಿ ಭಾಷಣಕ್ಕೆ ಪದೇ ಪದೇ ಅಡ್ಡಿ ಮಾಡುತ್ತಿದ್ದ ಸಾರ್ವಜನಿಕರ ಗುಂಪಿನ ವರ್ತನೆಯಿಂದ ಬೇಸತ್ತು ತಾಳ್ಮೆ ಕಳೆದುಕೊಂಡ ಗೃಹ ಸಚಿವ ರಾಜನಾಥ್ ಸಿಂಗ್, ಮೌನವಾಗಿರಿ ಇಲ್ಲಾಂದ್ರೆ ಕಪಾಳಮೋಕ್ಷ ಮಾಡುತ್ತೇನೆ ಎಂದು ಬೆದರಿಸಿದ ಘಟನೆ ವರದಿಯಾಗಿದೆ.
 
ಸಾರ್ವಜನಿಕ ಸಭೆಯಲ್ಲಿ ರಸಗೊಬ್ಬರ ಕುರಿತಂತೆ ಭಾಷಣ ಮಾಡುತ್ತಿರುವಾಗ ವೇದಿಕೆಯ ಮುಂದೆ ನೆರೆದಿದ್ದ ಪ್ರೇಕ್ಷಕರ ಗುಂಪು ಜೋರಾಗಿ ಕೂಗಲು ಆರಂಭಿಸಿತು. ಇದರಿಂದ ಕೆಂಡಾಮಂಡಲವಾದ ಸಿಂಗ್, ಸುಮ್ಮನಿರದಿದ್ರೆ ಕಪಾಳಮೋಕ್ಷ ಮಾಡುವುದಾಗಿ ಗರ್ಜಿಸಿದರು.
 
ಕೇಂದ್ರ ಸರಕಾರ ಉತ್ತರ ಪ್ರದೇಶ ರಾಜ್ಯಕ್ಕೆ ಹೆಚ್ಚಿನ ಬೆಂಬಲ ನೀಡುತ್ತಿಲ್ಲ ಎನ್ನುವ ಅಖಿಲೇಶ್ ಸರಕಾರದ ಹೇಳಿಕೆಯನ್ನು ಖಂಡಿಸಿದ ಅವರು, ಕೇಂದ್ರ ಸರಕಾರ ಯಾವುದೇ ರೀತಿಯ ನೆರವಿಗೆ ಬದ್ಧವಾಗಿದೆ ಎಂದರು.
 
ಮಥುರಾ ನಗರದಲ್ಲಿ ನಡೆದ ಹಿಂಸಾಚಾರಕ್ಕೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸರಕಾರವೇ ನೇರ ಹೊಣೆಯಾಗಿದೆ ಎಂದು ಆರೋಪಿಸಿದರು.
 
ಮಥುರಾದ ಜವಾಹರ್‌‍ಬಾಗ್‌ನಲ್ಲಿ ಸಾವಿರಾರು ಜನರು ಭೂ ಕಬಳಿಕೆ ಮಾಡಿಕೊಂಡಿದ್ದರೂ ಸರಕಾರಕ್ಕೆ ಮಾಹಿತಿಯಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಸಲು ಸರಕಾರ ಸಿದ್ದವಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ