ಪ್ರವಾಸಿಗರನ್ನು ಸ್ವಾಗತಿಸಿದ ಭೂತಾನ್ : ಭಾರತೀಯರಿಗೆ ದಿನಕ್ಕೆ 1,200 ರೂ. ಶುಲ್ಕ

ಶನಿವಾರ, 24 ಸೆಪ್ಟಂಬರ್ 2022 (09:08 IST)
ತಿಂಪು : ಕೊರೊನಾದಿಂದಾಗಿ 2 ವರ್ಷಗಳ ಕಾಲ ಬಂದ್ ಆಗಿದ್ದ ಭೂತಾನ್ ಇದೀಗ ಮತ್ತೆ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ತನ್ನ ಗಡಿಯನ್ನು ತೆರೆದಿದೆ.

ಭೂತಾನ್ ಸರ್ಕಾರವು ಪ್ರವಾಸಿ ತಾಣಗಳನ್ನು ವೀಕ್ಷಿಸಲು ಪ್ರವಾಸಿಗರ ಶುಲ್ಕವನ್ನು 200 ಡಾಲರ್ಗೆ ಏರಿಸಿದೆ. ಕಳೆದ 2 ವರ್ಷದ ಹಿಂದೆ ಇದು 65 ಡಾಲರ್ ಇತ್ತು. ಆದರೆ ಕೊರೊನಾಕ್ಕಿಂತ ಮೊದಲು ಭಾರತೀಯರಿಗೆ ಈ ರೀತಿಯ ಶುಲ್ಕದ ಯಾವುದೇ ನಿಯಮವಿರಲಿಲ್ಲ.

ಆದರೆ 2020ರ ಮಾರ್ಚ್ನಲ್ಲಿ ಭೂತಾನ್ನಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆ ಆಗಿತ್ತು. ಇದಾದ ನಂತರ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಭೂತಾನ್ ಪ್ರವಾಸ ಕೈಗೊಳ್ಳಲು ನಿಷೇಧ ಹೇರಿತ್ತು. 

80,000ಕ್ಕಿಂತಲೂ ಕಡಿಮೆ ಜನರಿರುವ ಹಿಮಾಲಯ ಸಾಮ್ರಾಜ್ಯದಲ್ಲಿ 61,000 ಜನರಿಗೆ ಕೊರೊನಾ ದೃಢಪಟ್ಟಿತ್ತು ಹಾಗೂ 21 ಜನರು ಮೃತಪಟ್ಟಿದ್ದರು. ಆದರೆ ಕಳೆದೆರಡು ವರ್ಷಗಳಿಂದ ಆರ್ಥಿಕ ನಷ್ಟದಿಂದಾಗಿ ಬಳಲುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ