ಐಸಿಎಸ್ ಸಂಘಟನೆ ಸೇರಲು ಹೊರಟಿದ್ದ ಮಹಿಳೆಯ ಬಂಧನ

ಮಂಗಳವಾರ, 2 ಆಗಸ್ಟ್ 2016 (14:49 IST)
ಭಯೋತ್ಪಾದನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ದೊಡ್ಡ ತಿಮಿಂಗಿಲವನ್ನು ಬಲೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ,
 
ಬಿಹಾರ್ ಮೂಲದ 28 ವರ್ಷ ವಯಸ್ಸಿನ ಮಹಿಳೆ ತನ್ನ 5 ವರ್ಷದ ಪುತ್ರನೊಂದಿಗೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
 
ವರದಿಗಳ ಪ್ರಕಾರ, ನಿಜವಾದ ಇಸ್ಲಾಂ ಜೀವನದ ಸವಿಯನ್ನು ಅನುಭವಿಸಲು ಮಹಿಳೆ, ಅಫ್ಘಾನಿಸ್ತಾನದ ಕಾಬೂಲ್‌ಗೆ ತೆರಳುವ ವಿಮಾನವನ್ನೇರಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಳು. ಮಹಿಳೆಯನ್ನು ಪಾಟ್ನಾ ಮೂಲದ ಯಾಸ್ಮಿನ್ ಮುಹಮ್ಮದ್ ಎಂದು ಗುರುತಿಸಲಾಗಿದೆ.
 
ಮಹಿಳೆಯನ್ನು ಸಂಪೂರ್ಣವಾಗಿ ವಿಚಾರಣೆಗೊಳಪಡಿಸಿದ ನಂತರ, ಆಕೆ ಐಸಿಎಸ್ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಗೊಳ್ಳಲು  ಯೋಜನೆ ರೂಪಿಸಿದ್ದಳು ಎನ್ನಲಾಗಿದೆ. ವಿಧುವೆಯಾಗಿರುವ ಯಾಸ್ಮಿನ್, ಕೇರಳದಿಂದ 21 ಯವಕರು ಮತ್ತು ಮಹಿಳೆಯರು ಐಸಿಎಸ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವ ಅನುಮಾನಗಳಿದ್ದು ಅವರೊಂದಿಗೆ ಸೇರ್ಪಡೆಗೊಳ್ಳಲು ಮಹಿಳೆ ಯೋಜನೆ ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
   
ಯಾಸ್ಮಿನ್ ಮುಹಮ್ಮೊದ್‌ಳನ್ನು ಕೇರಳ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದ್ದು ವಿಚಾರಣೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ