ನೀರಿನ ಟ್ಯಾಂಕ್‌ನಲ್ಲಿ ಸಿಗ್ತು ಕೋಟಿ ಕೋಟಿ!

ಭಾನುವಾರ, 9 ಜನವರಿ 2022 (10:14 IST)
ಭೋಪಾಲ್ : ಭೂಗತ ನೀರಿನ ಟ್ಯಾಂಕ್ ನಲ್ಲಿ ಅಡಿಗಿಸಿಡಲಾಗಿದ್ದ ಒಂದು ಕೋಟಿ ರೂ. ನಗದು ಸೇರಿದಂತೆ ಒಟ್ಟು 8 ಕೋಟಿ ರೂ.

ಮೌಲ್ಯದ ಸೊತ್ತನ್ನು ಉದ್ಯಮಿಯೊಬ್ಬರಿಂದ ಆದಾಯ ತೆರಿಗೆ ಇಲಾಖೆ ವಶ ಪಡಿಸಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಮಧ್ಯ ಪ್ರದೇಶದ ದಾಮೋಹ್ ಜಿಲ್ಲೆಯ ಉದ್ಯಮಿ ಶಂಕರ್ ರೈ ಹಾಗೂ ಆತನ ಕುಟುಂಬದ ಮೇಲೆ ಶನಿವಾರ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ್ದಯ, ಆತನಿಂದ ನಗದು, ಬಂಗಾರ ಸೇರಿ ಒಟ್ಟು 8 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿಕೊಂಡಿದೆ.

ವಶ ಪಡಿಸಿಕೊಳ್ಳಲಾದ ಒಂದು ಕೋಟಿ ರೂ. ನಗದನ್ನು ಭೂಗತ ನೀರಿನ ಟ್ಯಾಂಕ್ನಲ್ಲಿ ಬ್ಯಾಂಗ್ ಒಂದರಲ್ಲಿ ತುಂಬಿಟ್ಟು ಅಡಗಿಸಿಡಲಾಗಿತ್ತು. ಅಧಿಕಾರಿಗಳು ಹೇರ್ ಡ್ರೈಯರ್ಗಳು ಹಣ ಒಣಗಿಸುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ