ಮೋದಿ, ಅಮಿತ್ ಶಾ ಜೋಡಿಗೆ ಮುಖಭಂಗವಾಗುತ್ತಾ ತ್ರಿರಾಜ್ಯ ಚುನಾವಣೆ ಫಲಿತಾಂಶ?!
ತ್ರಿಪುರಾದಲ್ಲಿ ಬಿಜೆಪಿ 28 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೂ, ಆಡಳಿತಾರೂಢ ಸಿಪಿಎಂಗಿಂತ ಕೇವಲ 1 ಸ್ಥಾನ ಮುನ್ನಡೆಯಲ್ಲಿದೆ. ಸಿಪಿಎಂ ಮತ್ತು ಬಿಜೆಪಿ ಮೈತ್ರಿ ಕನಸಿನ ಮಾತು. ಮೇಘಾಲಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದತ್ತ ಸಾಗಿದ್ದು, ಬಿಜೆಪಿ ತೀರಾ ಹಿನ್ನಡೆಯಲ್ಲಿದೆ.
ಅತ್ತ ನ್ಯಾಗಾಲ್ಯಾಂಡ್ ನಲ್ಲೂ ಎನ್ ಪಿಎಫ್ ನಿಂದ ಬಿಜೆಪಿಗೆ ತೀವ್ರ ಪೈಪೋಟಿ ಸಿಕ್ಕಿದೆ. ಹಾಗಾಗಿ ಇಲ್ಲೂ ಸರ್ಕಾರ ರಚನೆ ಸುಲಭವಲ್ಲ. ಒಟ್ಟಾರೆ ಕೇಂದ್ರ ಸರ್ಕಾರಕ್ಕೆಇದು ಮುಖಭಂಗ ಉಂಟುಮಾಡುವ ಲಕ್ಷಣಗಳಿವೆ.