ಸಂಸತ್ ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣು!

ಮಂಗಳವಾರ, 26 ಏಪ್ರಿಲ್ 2022 (16:45 IST)
ನವದೆಹಲಿ : 2024ರ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ, ಕಳೆದ 2 ಚುನಾವಣೆಯಲ್ಲಿ ತಾನು ಕಳಪೆ ಸಾಧನೆ ಮಾಡಿದ್ದ 150 ಲೋಸಕಭಾ ಕ್ಷೇತ್ರಗಳು ಮತ್ತು 73000 ಬೂತ್ಗಳ ಬಗ್ಗೆ ಹೆಚ್ಚಿನ ಗಮನ ಹರಿಸಲು ನಿರ್ಧರಿಸಿದೆ.

ಅಲ್ಲದೆ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಪಕ್ಷದ ಉಪಾಧ್ಯಕ್ಷ ಬೈಜಯಂತ್ ಪಾಂಡ ನೇತೃತ್ವದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ದಿಲೀಪ್ ಘೋಷ್, ಲಾಲ್ ಸಿಂಗ್ ಆರ್ಯ ಅವರನ್ನೊಳಗೊಂಡ ಸಮಿತಿ ರಚಿಸಿದೆ.

ವಿಶೇಷವೆಂದರೆ, ಪಕ್ಷ ದುರ್ಬಲವಾಗಿದೆ ಎಂದು ಗುರುತಿಸಲಾದ 73000 ಬೂತ್ಗಳ ಪೈಕಿ ಬಹುತೇಕ ದಕ್ಷಿಣ ಭಾರತ ಮತ್ತು ಈಶಾನ್ಯದ ರಾಜ್ಯಗಳದ್ದೇ ಆಗಿದೆ. ಹೀಗಾಗಿ ಇಲ್ಲಿ ಪಕ್ಷವನ್ನು ಬಲಗೊಳಿಸಲು ವಿಶೇಷ ನೀಲನಕ್ಷೆ ರೂಪಿಸಲಾಗಿದೆ.

ಈ ಸಮಿತಿ ಈಗಾಗಲೇ 73000 ಬೂತ್ಗಳು ಮತ್ತು ಕಳೆದ ಬಾರಿ ಕಳಪೆ ಸಾಧನೆ ಮಾಡಿದ್ದ 150 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸುವ ಕುರಿತು ನೀಲನಕ್ಷೆ ಸಿದ್ಧಪಡಿಸಿದೆ. ಅದನ್ನು ಮುಂದಿನ ಸೋಮವಾರ ನಡೆಯುವ ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಮಂಡಿಸಲಾಗುವುದು.

ಅಲ್ಲಿ ಈ ಬಗ್ಗೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಂಡು, ಅದನ್ನು ಸಂಬಂಧಿಸಿದ ರಾಜ್ಯಗಳಿಗೆ ಅಗತ್ಯ ಕ್ರಮಕ್ಕೆ ರವಾನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ