ಬಿಜೆಪಿ ನಾಯಕ, ವಿಧಾನ ಸಭೆ ಮಾಜಿ ಸ್ಪೀಕರ್ ನಿಧನ

ಭಾನುವಾರ, 2 ಆಗಸ್ಟ್ 2020 (17:06 IST)
ಬಿಜೆಪಿ ಹಿರಿಯ ನಾಯಕ ಹಾಗೂ ವಿಧಾನ ಸಭೆ ಮಾಜಿ ಸ್ಪೀಕರ್ ನಿಧನರಾಗಿದ್ದಾರೆ.

ಹೃದಯಾಘಾತವು ಗೋವಾ ರಾಜ್ಯದ ವಿಧಾನಸಭೆಯ ಮಾಜಿ ಸ್ಪೀಕರ್ ಹಾಗೂ ಬಿಜೆಪಿ ಹಿರಿಯ ಮುಖಂಡರಾಗಿದ್ದ ಅನಂತ್ ಶೇಠ್​ ಅವರನ್ನು ಬಲಿ ಪಡೆದುಕೊಂಡಿದೆ.

60 ವರ್ಷದ ಅನಂತ್ ಸೇಠ್ ನಿಧನದ ಬಗ್ಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಟ್ವಿಟ್ ಮಾಡಿ ತಿಳಿಸಿ, ಸಂತಾಪ ವ್ಯಕ್ತಪಡಿಸಿದ್ದಾರೆ.

ಸೇಠ್ ನಿಧನವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಅಪಾರ ನೋವುಂಟು ಮಾಡಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ