ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸಿದ್ರೆ ಹಜ್ ಯಾತ್ರೆ ಬಂದ್: ಬಿಜೆಪಿ ಶಾಸಕ

ಶುಕ್ರವಾರ, 14 ಜುಲೈ 2017 (12:49 IST)
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಪಕ್ಷದ ನಾಯಕರು ಕಟುವಾದ ಮಾತುಕತೆಗಳು ಮತ್ತು ಅನಗತ್ಯ ಹೇಳಿಕೆಗಳನ್ನು ನೀಡದಂತೆ ತಾಕೀತು ಮಾಡಿದ್ದರೂ, ಬಿಜೆಪಿ ಶಾಸಕರೊಬ್ಬರು ಸಾಮಾಜಿಕ ತಾಣಗಳಲ್ಲಿ ಅಮರನಾಥ್ ಯಾತ್ರೆಯಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಪ್ರಸ್ತಾಪಿಸಿ, ಹಜ್ ಯಾತ್ರಿಗಳಿಗೆ ಬೆದರಿಕೆಯೊಡ್ಡಿದ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. 
 
ಒಂದು ವೇಳೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ತಡೆಯೊಡ್ಡಿದಲ್ಲಿ ಮುಸ್ಲಿಂ ಸಮುದಾಯದ ಜನರು ಮೆಕ್ಕಾ ಮತ್ತು ಮದೀನಾಗೆ ಹೋಗುವುದನ್ನು ನಿಲ್ಲಿಸುತ್ತೇನೆ ಎಂದು ಬಿಜೆಪಿ ಶಾಸಕ ಬ್ರಿಜ್‌ಭೂಷಣ್ ರಜಪೂತ್ ತಮ್ಮ ಲೈವ್ ವೀಡಿಯೊದಲ್ಲಿ ತಿಳಿಸಿದ್ದಾರೆ.
 
ಭಗವನ್ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯದವರು ಅಡ್ಡಿಪಡಿಸಿದಲ್ಲಿ, ಮುಸ್ಲಿಂ ಸಮುದಾಯದವರು ಮೆಕ್ಕಾ ಮದೀನಾಗೆ ಹೋಗುವುದನ್ನು ಶಾಸಕ ಗುಡ್ಡು ರಾಜ್‌ಪೂತ್ ತಡೆಯುತ್ತಾರೆ ಎಂದು ಗುಡುಗಿದ್ದಾರೆ. 
 
ಸಾಮಾಜಿಕ ಅಂತರ್ಜಾಲ ತಾಣದಲ್ಲಿ ವಿಡಿಯೋದೊಂದಿಗೆ ಸಂದೇಶವನ್ನೂ ಪೋಸ್ಟ್ ಮಾಡಿದ್ದು, ಅಮರನಾಥ್ ಯಾತ್ರಿಕರ ಮೇಲೆ ನಡೆಸಿದ ಉಗ್ರರು ದಾಳಿ ಹಿಂದು ಧರ್ಮದವರನ್ನು ಕೆರಳಿಸುವಂತಹ ಪ್ರಯತ್ನವಾಗಿದೆ. ನಮ್ಮ ಸರಕಾರ ಇಂತಹ ದೇಶದ್ರೋಹಿಗಳಿಗೆ ಏಳೇಳು ಜನ್ಮದಲ್ಲಿ ಹಿಂದುಗಳಿಗೆ ಬೆರಳು ತೋರಿಸಲು ಧೈರ್ಯವಾಗದಂತಹ ತಕ್ಕ ಪಾಠ ಕಲಿಸಬೇಕಾಗಿದೆ ಬಿಜೆಪಿ ಶಾಸಕ ಬ್ರಿಜ್‌ಭೂಷಣ್ ರಾಜ್‌ಪೂತ್ ಕಿಡಿಕಾರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ