ಮಿಜೋರಾಂ ಹೆಸರು ತಪ್ಪಾಗಿ ಹೇಳಿದ ರಾಹುಲ್ ಗಾಂಧಿಗೆ ಇಂಪೋಸಿಷನ್ ಬರೆಯಿರಿ ಎಂದ ಬಿಜೆಪಿ
ಮಿಜೋರಾಂ ಹುಡುಗಿಯರ ಸಾಧನೆ ಬಗ್ಗೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ ರಾಹುಲ್ ಗಾಂಧಿ ಮಣಿಪುರ ಎಂದು ತಪ್ಪಾಗಿ ಹೇಳಿದ್ದರು. ಇದನ್ನು ನೋಡಿ ಬಿಜೆಪಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ಅಮಿತ್ ಮಾಲ್ವಿಯಾ ವ್ಯಂಗ್ಯ ಮಾಡಿದ್ದಾರೆ.
ರಾಹುಲ್ ಗಾಂಧಿ ಮಿಜೋರಾಂ ಹೆಸರನ್ನು 100 ಸಲ ಇಂಪೋಸಿಷನ್ ಬರೆಯಬೇಕು ಎಂದು ಅಮಿತ್ ಟ್ವೀಟ್ ನಲ್ಲಿ ವ್ಯಂಗ್ಯ ಮಾಡಿದ್ದಾರೆ. ತಮ್ಮ ತಪ್ಪು ಗೊತ್ತಾದ ತಕ್ಷಣ ಕಾಂಗ್ರೆಸ್ ಈ ಟ್ವೀಟ್ ನ್ನು ಅಳಿಸಿ ಹಾಕಿದೆ. ಆದರೆ ಅಷ್ಟರಲ್ಲೇ ಇದು ಟೀಕಾಕಾರರ ಕಣ್ಣಿಗೆ ಬಿದ್ದಾಗಿತ್ತು.