Viral video ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಹಿಗ್ಗಾ ಮುಗ್ಗಾ ಥಳಿತ
ಚರಣ್ ಪ್ರೀತ್ ಸಿಂಗ್ ಮತ್ತು ಆತನ ಪತ್ನಿ ಹಲ್ಲೆಗೊಳಗಾದವರು. ಇವರು ಕಿಂಟೋರ್ ಅವೆನ್ಯೂ ಬಳಿ ತಮ್ಮ ಕಾರು ಪಾರ್ಕ್ ಮಾಡಿದ್ದರು. ರಾತ್ರಿ ವೇಳೆ ನಗರದ ಸೌಂದರ್ಯ ವೀಕ್ಷಿಸುತ್ತಾ ನಿಂತಿದ್ದ ದಂಪತಿ ಮೇಲೆ ಹಲ್ಲೆ ನಡೆಸಲಾಗಿದೆ.
ಮೊದಲು ಕಾರಿನ ಮೇಲೆ ದಾಳಿ ಮಾಡಲಾಗಿದೆ. ನಂತರ ಕಾರು ಹತ್ತಲು ಯತ್ನಿಸಿದ ಚರಣ್ ಸಿಂಗ್ ರನ್ನು ಎಳೆದಾಡಿ ನೆಲಕ್ಕೆ ಕೆಡವಿ ಕಾಲಿನಿಂದ ತುಳಿಯಲಾಗುತ್ತದೆ. ದುಷ್ಕರ್ಮಿಗಳ ಕೈಯಲ್ಲಿ ಹರಿತ ಆಯುಧಗಳೂ ಇತ್ತು ಎನ್ನಲಾಗಿದೆ. ಜೊತೆಗೆ ಭಾರತೀಯ ಎಂದು ಅಶ್ಲೀಲ ಶಬ್ಧ ಬಳಸಿ ನಿಂದಿಸಿದ್ದಾರೆ.
ಹೀಗಾಗಿ ಇದು ಜನಾಂಗೀಯ ಧ್ವೇಷದ ದಾಳಿಯಾಗಿರಬಹುದೇ ಎಂದು ಸಂಶಯಿಸಲಾಗಿದೆ. ಕೆಲವು ಸಮಯದ ಹಿಂದೆ ಆಸ್ಟ್ರೇಲಿಯಾದಲ್ಲಿ ಪದೇ ಪದೇ ಭಾರತೀಯರ ಮೇಲೆ ಜನಾಂಗೀಯ ದಾಳಿಗಳಾಗುತ್ತಿತ್ತು. ಅದಾದ ಬಳಿಕ ತಣ್ಣಗಾಗಿತ್ತು. ಇದೀಗ ಮತ್ತೆ ಭಾರತೀಯನ ಮೇಲೆ ದಾಳಿಯಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.