ರಾಹುಲ್ ಗಾಂಧಿ ತಪ್ಪು ಫೋಟೋ ಬಳಕೆ ಮಾಡಿ ಬಿಜೆಪಿ ಎಡವಟ್ಟು

ಬುಧವಾರ, 30 ಆಗಸ್ಟ್ 2017 (10:30 IST)
ಮುಂಬೈ: ಡೇರಾ ಸಚ್ಚಾ ಬಾಬಾ ಪ್ರಕರಣದಲ್ಲಿ ಬಿಜೆಪಿ ಮೇಲೆ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಗೆ ತಿರುಗೇಟು ನೀಡಲು ಹೋಗಿ ಬಿಜೆಪಿ ಎಡವಟ್ಟು ಮಾಡಿಕೊಂಡಿದೆ.

 
ರಾಹುಲ್ ಗಾಂಧಿ 2017 ರಲ್ಲಿ ಇದೇ ಡೇರಾ ಬಾಬಾ ಬಳಿ ಹೋಗಿ ಪಂಜಾಬ್ ಚುನಾವಣೆ ಸಂದರ್ಭದಲ್ಲಿ ಬೆಂಬಲ ಕೋರಿದ್ದರು ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಲ್ವಿಯಾ ರಾಹುಲ್ ಫೋಟೋ ಸಮೇತ ಟ್ವೀಟ್ ಮಾಡಿದ್ದರು.

ಆದರೆ ಫೋಟೋದಲ್ಲಿ ರಾಹುಲ್ ಜತೆಗಿರುವ ಬಾಬಾ ಡೇರಾ ರಾಮ್ ರಹೀಂ ಸಿಂಗ್ ಅಲ್ಲ. ಡೇರಾ ಸಚ್ ಕಾಂಡ್ ಬಲ್ಲಾನ್ ಮುಖ್ಯಸ್ಥ ಸಂತ ನಿರಂಜನ ದಾಸ್. ಇವರನ್ನೇ ಡೇರಾ ಬಾಬಾ ಜತೆಗಿದ್ದಾರೆ ಎಂದು ಬಿಜೆಪಿ ಎಡವಟ್ಟು ಮಾಡಿಕೊಂಡಿದೆ. ಸಾರ್ವಜನಿಕರು ಈ ತಪ್ಪು ಪತ್ತೆ ಮಾಡಿ ಹೇಳಿದರೂ, ಒಂದು ದಿನ ತಡವಾಗಿ ಮಾಲ್ವಿಯಾ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಇದನ್ನೂ ಓದಿ.. ಇಂಗ್ಲೆಂಡ್ ನಲ್ಲಿ ಖಾತೆ ಓಪನ್ ಮಾಡಿದ ಆರ್ ಅಶ್ವಿನ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ