ನೋಟು ನಿಷೇಧ ಕುರಿತಂತೆ ಸಂಸತ್ತಿನಲ್ಲಿ ಮೌನವಹಿಸಿರುವ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಸಂಸತ್ತಿನಲ್ಲಿ ಅಲ್ಪ ಹಾಜರಾತಿ ಹೊಂದಿದವರು ಪ್ರಧಾನಿಗೆ ಪ್ರಶ್ನೆ ಕೇಳುವಂತಿಲ್ಲ ಎಂದು ತಿರುಗೇಟು ನೀಡಿದೆ.
ಲೋಕಸಭೆಯಲ್ಲಿ ಇತರ ಸಂಸದರು ಶೇ.90 ರಷ್ಟು ಹಾಜರಾತಿ ಹೊಂದಿರುವಾಗ ಶೇ.40 ರಷ್ಟು ಹಾಜರಾತಿ ಹೊಂದಿದ ಸಂಸದ ರಾಹುಲ್ ಗಾಂಧಿ, ಪ್ರಧಾನಿಗೆ ಪ್ರಶ್ನೆ ಕೇಳಲು ಬಯಸುತ್ತಾರೆ. ಅವರ ಹಾಜರಾತಿ ನೋಡಿದರೆ ಸಂಸತ್ತಿನ ಕಲಾಪಗಳ ಬಗ್ಗೆ ಅವರು ಎಷ್ಟು ಗಂಭೀರವಾಗಿದ್ದಾರೆ ಎನ್ನುವ ಅರಿವಾಗುತ್ತದೆ ಎಂದು ಬಿಜೆಪಿ ಮುಖಂಡ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.