ಬಿಜೆಪಿ ವಿರುದ್ಧ ಮಹಾಘಟಬಂಧನ್ : ಕಾಂಗ್ರೆಸ್ – ಆರ್ ಜೆ ಡಿ ದೋಸ್ತಿ

ಶನಿವಾರ, 3 ಅಕ್ಟೋಬರ್ 2020 (22:25 IST)
ಬಹುನಿರೀಕ್ಷಿತ ಬಿಹಾರ ವಿಧಾನಸಭೆ ಚುನಾವಣೆಗಾಗಿ ರಾಜಕೀಯ ಲೆಕ್ಕಾಚಾರದಂತೆ ಬಿಜೆಪಿ ವಿರುದ್ಧ ಮಹಾಘಟಬಂಧನ್ ಸಿದ್ಧಗೊಂಡಿದೆ.

ಕಾಂಗ್ರೆಸ್ ಮತ್ತು ಆರ್ ಜೆಡಿ ಮಹಾಘಟಬಂಧನ್ ನಲ್ಲಿನ ಪ್ರಮುಖ ಪಕ್ಷಗಳಾಗಿದ್ದು, ಸೀಟು ಹಂಚಿಕೆಯನ್ನು ಅಂತಿಮಗೊಳಿಸಿಕೊಂಡಿವೆ.

ಮುಖಂಡ ತೇಜಸ್ವಿ ಯಾದವ್ಮಹಾಘಟಬಂಧನ್ದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ.

243 ಕ್ಷೇತ್ರಗಳ ಬಿಹಾರ ಚುನಾವಣೆಯ, ಕಾಂಗ್ರೆಸ್ 70, ಆರ್ಜೆಡಿ 144, ಸಿಪಿಐ 6, ಸಿಪಿಐ(ಎಂಎಲ್) 19 ವಿಧಾನಸಭೆ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿವೆ. ಅಕ್ಟೋಬರ್ 28, ನವೆಂಬರ್ 3 ಹಾಗೂ 7ರಂದು ಚುನಾವಣೆ ನಡೆಯಲಿವೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ