ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುತ್ತೆ : ಮುನಿರತ್ನ

ಮಂಗಳವಾರ, 21 ಫೆಬ್ರವರಿ 2023 (06:21 IST)
ಜನರಿಗೆ ಕಾಂಗ್ರೆಸ್ನವರೇ ಸಂದೇಶ ಕೊಡುತ್ತಿದ್ದಾರೆ. ಅದಕ್ಕೆ ಕೇಸರಿ ಹೂ ಅನ್ನು ತಮ್ಮ ಕಿವಿ ಮೇಲೆ ಇಟ್ಕೊಂಡಿದ್ದಾರೆ.

ಡಿಕೆಶಿ ಅವ್ರು ನಾಲ್ಕು ನಾಲ್ಕು ಹೂ ಇಟ್ಕೊಂಡಿದ್ದು ಅದಕ್ಕೇ ಎಂದ ಅವರು, ಕಾಂಗ್ರೆಸ್ನವ್ರು ಎಲ್ಲ ಕಡೆ ಬುರುಡೆ ಬಿಡುತ್ತಿದ್ದಾರೆ. 130-140 ಸ್ಥಾನ ತಗೆದುಕೊಳ್ಳುವವರು ಏನಕ್ಕೆ ಎಲ್ಲರ ಮನೆಗೆ ಹೋಗಿ ಬನ್ನಿ ಬನ್ನಿ ಎನ್ನಬೇಕು.

ಬಿಜೆಪಿಯ ಒಂದು ಸಣ್ಣ ಕಾರ್ಯಕರ್ತನೂ ಕಾಂಗ್ರೆಸ್ಗೆ ಹೋಗಲ್ಲ. ಇನ್ನು ನಾವು ಏನಾದರೂ ಕೈ ಹಾಕೋಕೆ ಹೋದ್ರೆ ಕಾಂಗ್ರೆಸ್ ಅರ್ಧನೂ ಇರಲ್ಲ. ಈಗಾಗಲೇ ನಾವು ಅದನ್ನು ಮಾಡಿ ತೋರಿಸಿದ್ದೇವೆ.

ಎಲ್ಲ ಭಾಗ್ಯಗಳು ಕೊಟ್ಟಾಗಗಲೇ 80 ಸ್ಥಾನ ಬಂದ್ದಿದ್ದವು. ಈಗ ಎಲ್ಲಿಂದ 130 ಸೀಟು ಬರುತ್ತದೆ. ನಾವೇ ಮತ್ತೆ ಸರ್ಕಾರ ರಚನೆ ಮಾಡುತ್ತದೆ. ನಮ್ಮ ಸಂಪರ್ಕದಲ್ಲಿರೋರನ್ನು ಬಿಜೆಪಿಗೆ ಕರೆತಂದ್ರೆ, ಕಾಂಗ್ರೆಸ್ ಕಚೇರಿಗೆ ಬಾಗಿಲು ಮುಚ್ಚಬೇಕು ಎಂದು ಕಿಡಿಕಾರಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ