ನಾಗಿಣಿ ಪ್ರತೀಕಾರಕ್ಕೆ ಗ್ರಾಮದಲ್ಲಿ ಮರಣ ಮೃದಂಗ

ಗುರುವಾರ, 13 ಅಕ್ಟೋಬರ್ 2016 (12:20 IST)
ಉತ್ತರ ಪ್ರದೇಶದ ರಾಮಪುರ ಜಿಲ್ಲೆಯ ಪರಮ್ ಗ್ರಾಮದಲ್ಲಿ ಕಾಳಿಂಗ ಸರ್ಪವೊಂದು 24 ಗಂಟೆಗಳಲ್ಲಿ ಬರೊಬ್ಬರಿ 52 ಜನರಿಗೆ ಕಚ್ಚಿದ್ದು ಅದರಲ್ಲಿ ನಾಲ್ವರು ವಿಷವೇರಿ ದುರ್ಮರಣವನ್ನಪ್ಪಿದ್ದಾರೆ. 

ಹಾವಿನ ದ್ವೇಷ ಹನ್ನೆರಡು ವರ್ಷ ಎನ್ನುತ್ತಾರೆ. ಈ ನಾಗಿಣಿ ಸಹ ತನ್ನ ಇನಿಯನನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ ಈ ರೀತಿಯಲ್ಲಿ ಮರಣ ಮೃದಂಗ ಬಾರಿಸುತ್ತಿದೆ ಎನ್ನಲಾಗುತ್ತಿದೆ. 
 
ಕಳೆದ ಕೆಲ ದಿನಗಳ ಹಿಂದೆ ಈ ಗ್ರಾಮದಲ್ಲಿ ವಿಷಪೂರಿತ ಹಾವೊಂದನ್ನು ಹೊಡೆದು ಸಾಯಿಸಲಾಗಿತ್ತು. ಅದಾದ ಕೆಲ ಗಂಟೆಗಳಲ್ಲಿಯೇ ನಾಗಿಣಿಯೊಂದು ಗ್ರಾಮಸ್ಥರಿಗೆ ತೊಂದರೆ ನೀಡಲು ಪ್ರಯತ್ನಿಸಿದೆ. 
 
ಸಂಪೂರ್ಣ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಜನರೆಲ್ಲ ಬಡಿಗೆಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದಾರೆ.
 
ಉರಗ ತಜ್ಞರನ್ನು ಕರೆಸಿ ಹಾವನ್ನು ಹಿಡಿಯುವುದಾಗಿ ಜಿಲ್ಲಾಡಳಿತ ಗ್ರಾಮಸ್ಥರಿಗೆ ಭರವಸೆ ನೀಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ