ಎದೆಹಾಲು ಸೇರಿದ ಹಾವಿನ ವಿಷ; ತಾಯಿ-ಮಗು ಸಾವು

ಶನಿವಾರ, 4 ಜೂನ್ 2016 (09:27 IST)
ಹಾವು ಕಚ್ಚಿದ ಪರಿಣಾಮ ಮಹಿಳೆ ಮತ್ತು ಆಕೆಯ ಹಾಲು ಕುಡಿದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ನೆರೆಯ ರಾಜ್ಯ ಆಂಧ್ರದ ಅನಂತಪುರದಲ್ಲಿ ನಡೆದಿದೆ. 

ಜಿಲ್ಲೆಯ ಗೂಟಿ ಮಂಡಲದ ಲೆಟ್ಚನಪಲ್ಲಿ ಗ್ರಾಮದಲ್ಲಿ ಗುರುವಾರ ಮುಂಜಾನೆ ಈ ಘಟನೆ ನಡೆದಿದೆ. 
 
ಮೃತಳನ್ನು 28 ವರ್ಷದ ಚಂದ್ರಲೇಖಾ ಮತ್ತು ಆಕೆಯ 18 ತಿಂಗಳ ಮಗು ವಂಶಿ ಎಂದು ಗುರುತಿಸಲಾಗಿದೆ.
 
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಚಂದ್ರಕಲಾ, ಆಕೆಯ ಪತಿ ಲಿಂಗಣ್ಣ ಮತ್ತು ಮಗು ತಮ್ಮ ಹಳೆಯ ಮನೆಯಲ್ಲಿ ಮಲಗಿದ್ದರು. ರಾತ್ರಿ ಚಂದ್ರಕಲಾಗೆ ತನ್ನ  ಕಾಲಿಗೆ ಏನೋ ಕುಟುಕಿದ ಅನುಭವವಾಗಿದೆ. ಯಾವುದೋ ಹುಳ ಕಚ್ಚಿರಬೇಕು ಎಂದುಕೊಂಡ ಆಕೆ ಮತ್ತೆ ಮಲಗಿದ್ದಾಳೆ. ಸ್ವಲ್ಪ ಸಮಯದ ಬಳಿಕ ಆಕೆಯ ಮಗು ವಂಶಿ ಹಸುವಿನಿಂದ ಅತ್ತಿದೆ. ಹೀಗಾಗಿ ಆಕೆ ಎದೆ ಹಾಲು ಕುಡಿಸಿದ್ದಾಳೆ. 
 
ಮುಂಜಾನೆ ತಾಯಿ ಮಗು ಬಾಯಲ್ಲಿ ನೊರೆ ಬರುತ್ತಿದ್ದುದನ್ನು ಕಂಡ ಪತಿ ಲಿಂಗಣ್ಣ ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೊದಲು ತಾಯಿ, ಬಳಿಕ ಮಗು ಮೃತ ಪಟ್ಟಿದೆ. 
 
ಚಂದ್ರಕಲಾ ಕಾಲಿಗೆ ಕಚ್ಚಿದ ಹಾವಿನ ವಿಷ ಎದೆಹಾಲು ಸೇರಿದ್ದರಿಂದ ಮಗು ಕೂಡ ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದಾರೆ.
 
ಅನಂತಪುರ ಮತ್ತು ರಾಯಲ್‌ಸೀಮಾ ಪ್ರಾಂತ್ಯದ ಗ್ರಾಮೀಣ ಭಾಗಗಳಲ್ಲಿ ಹಾವಿನ ಕಡಿತದಿಂದ ಸಾಯುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಹಾವಿನಿಂದ ಕಚ್ಚಿಸಿಕೊಂಡ ತಾಯಿ ಹಾಲು ಕುಡಿದು ಮಗು ಸತ್ತಿರುವುದು ಮಾತ್ರ ಇದೇ ಮೊದಲ ಬಾರಿಗೆ ನಡೆದ ಘಟನೆಯಾಗಿದೆ. 
 
ಗುತ್ತಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ