ಉಪರಾಷ್ಟ್ರಪತಿ ರಾಧಾಕೃಷ್ಣನ್ ನಿವಾಸಕ್ಕೆ ಬಾಂಬ್ ಬೆದರಿಕೆ: ಸ್ಥಳಕ್ಕೆ ‌ದೌಡಾಯಿಸಿದ ಪೊಲೀಸರು

Sampriya

ಶುಕ್ರವಾರ, 17 ಅಕ್ಟೋಬರ್ 2025 (14:11 IST)
Photo Credit X
ಚೆನ್ನೈ: ನೂತನವಾಗಿ ಉಪರಾಷ್ಟ್ರಪತಿಯಾಗಿ ಕಳೆದ ತಿಂಗಳು ಆಯ್ಕೆಯಾದ ಸಿ.ಪಿ. ರಾಧಾಕೃಷ್ಣನ್ ಅವರ ಚೆನ್ನೈ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. 

ಬೆದರಿಕೆ ಕರೆ ಬಂದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇದೊಂದು ಸುಳ್ಳು ಬೆದರಿಕೆ ಕರೆ ಎಂಬುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಧಾಕೃಷ್ಣನ್ ಅವರ ಪೋಯಸ್ ಗಾರ್ಡನ್ ನಿವಾಸಕ್ಕೆ ಬೆದರಿಕೆ ಇಮೇಲ್ ಬಂದಿದೆ. ಕೂಡಲೇ ಅದು ಚೆನ್ನೈನ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ಅದು ತಲುಪಿದೆ. ಮಾಹಿತಿ ಬಂದ ತಕ್ಷಣ, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳದ (ಬಿಡಿಡಿಎಸ್) ತಜ್ಞರು ಮತ್ತು ಪೊಲೀಸರ ತಂಡ, ಸ್ನಿಫರ್ ಶ್ವಾನದಳದೊಂದಿಗೆ ಉಪರಾಷ್ಟ್ರಪತಿಯವರ ಮನೆಗೆ ಧಾವಿಸಿ ಪರಿಶೀಲನೆ ನಡೆಸಿದರು.

ಪೊಲೀಸ್ ಪರಿಶೀಲನೆ ವೇಳೆ ಯಾವುದೇ ಅಹಿತಕರ ವಸ್ತುಗಳು ಕಂಡುಬಂದಿಲ್ಲ. ಹೀಗಾಗಿ ಇದೊಂದು ಸುಳ್ಳು ಬೆದರಿಕೆ ಕರೆ ಇರಬಹುದು ಎಂದು ಪೊಲೀಸ್ ಶಂಕಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಚೆನ್ನೈ ಪೊಲೀಸರಿಗೆ ಇಂತಹ ಹಲವಾರು ಇಮೇಲ್ ಬೆದರಿಕೆಗಳು ಬರುತ್ತಿವೆ. ಬೆದರಿಕೆ ಕರೆಗಳನ್ನು ಯಾರು ಕಳುಹಿಸುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ