Video: ವಿರಾಟ್ ಕೊಹ್ಲಿ ಅಟೋಗ್ರಾಫ್ ಕೊಟ್ಟಿದ್ದಕ್ಕೆ ಈ ಹುಡುಗ ಹಿಂಗೆಲ್ಲಾ ಮಾಡೋದಾ

Krishnaveni K

ಶುಕ್ರವಾರ, 17 ಅಕ್ಟೋಬರ್ 2025 (10:45 IST)
Photo Credit: X
ಪರ್ತ್: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಾಗಿ ಅಭ್ಯಾಸ ನಡೆಸುತ್ತಿರುವ ವಿರಾಟ್ ಕೊಹ್ಲಿ ಅಭಿಮಾನಿ ಹುಡುಗನಿಗೆ ಆಟೋಗ್ರಾಫ್ ನೀಡಿದ್ದಾರೆ. ಈ ವೇಳೆ ಆತನ ಖುಷಿ ಎಷ್ಟಿತ್ತೆಂಬುದಕ್ಕೆ ಈ ವಿಡಿಯೋವೇ ಸಾಕ್ಷಿ.

ವಿರಾಟ್ ಕೊಹ್ಲಿ ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಅವರ ಜೊತೆ ಒಂದು ಸೆಲ್ಫೀ, ಆಟೋಗ್ರಾಫ್ ಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇದೀಗ ಆಸ್ಟ್ರೇಲಿಯಾ ಸರಣಿಗೆ ಅಭ್ಯಾಸ ನಡೆಸುತ್ತಿರುವ ವಿರಾಟ್ ಕೊಹ್ಲಿ ಗ್ರೌಂಡ್ ಗೆ ಹೋಗುವ ಹಾದಿಯಲ್ಲಿ ತಮಗಾಗಿ ಕಾಯುತ್ತಿದ್ದ ಅಭಿಮಾನಿಗಳತ್ತ ಬಂದು ಆಟೋಗ್ರಾಫ್ ನೀಡಿದ್ದಾರೆ.

ಗೇಟ್ ಹೊರಗೆ ತಮಗಾಗಿ ಕಾಯುತ್ತಾ ನಿಂತಿದ್ದ ಅಭಿಮಾನಿಗಳಿಗೆ ಕೊಹ್ಲಿ ಆಟೋಗ್ರಾಫ್ ನೀಡುತ್ತಾ ಹೋಗುತ್ತಾರೆ. ಈ ವೇಳೆ ಒಬ್ಬ ಹುಡುಗನೂ ತನ್ನ ಕ್ಯಾಪ್ ನೀಡಿ ಆಟೋಗ್ರಾಫ್ ಪಡೆಯುತ್ತಾನೆ. ಕೊಹ್ಲಿಯಿಂದ ಆಟೋಗ್ರಾಫ್ ಪಡೆದ ಬಳಿಕ ಆತನ ಖುಷಿಗೆ ಮೇರೆಯೇ ಇರುವುದಿಲ್ಲ.

ಸೀದಾ ಓಡಿ ಹೋಗಿ ನೆಲಕ್ಕೆ ಬಿದ್ದು ಹೊರಳಾಡಿ ಮತ್ತೆ ಡ್ಯಾನ್ಸ್ ಮಾಡಿ ಸಂಭ್ರಮಿಸುತ್ತಾನೆ. ಆತನ ಖುಷಿ, ಸಂಭ್ರಮಾಚರಣೆ ನೋಡಿ ನೆಟ್ಟಿಗರು ನಾವೂ ಬಹುಶಃ ಹೀಗೇ ಮಾಡ್ತಿದ್ದೆವು. ನಮ್ಮದೂ ಇದೇ ಫೀಲಿಂಗ್ ಇರ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.


The happiness of a Kid after getting Virat Kohli's autograph ????❤️pic.twitter.com/e5dhcAPVw8

— Suprvirat (@Mostlykohli) October 16, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ