ಚೀನಾ ಬೆದರಿಕೆಗೆ ಬಗ್ಗದ ಭಾರತ: ಡೋಕ್ಲಾಮ್ ಗಡಿಯಲ್ಲಿ ಟೆಂಟ್ ಹಾಕಿದ ಸೇನೆ

ಸೋಮವಾರ, 10 ಜುಲೈ 2017 (10:31 IST)
ನವದೆಹಲಿ:ಉಭಯ ದೇಶಗಳ ಗಡಿ ಬಿಕ್ಕಟ್ಟು ಮುಂದುವರೆದಿರುವ ಹಿನ್ನಲೆಯಲ್ಲಿ ಗಡಿ ಬಿಟ್ಟು ಹೋಗಿ ಇಲ್ಲವೇ ಯುದ್ಧ ಎದುರಿಸಲು ಸಿದ್ಧರಾಗಿ ಎಂಬ ಚೀನಾದ ಬೆದರಿಕೆಗೆ ಭಾರತ ಸೆಡ್ಡು ಹೊಡೆದಿದೆ. 
 
ಚೀನಾದ ಒತ್ತಡ ಹಾಗೂ ಬೆದರಿಕೆಗಳಿಂದ ಹಿಂದಕ್ಕೆ ಸರಿಯಲ್ಲ ಎಂಬ ಸಂದೇಶವನ್ನು ನೀಡುವ ಸಲುವಾಗಿ ಭಾರತೀಯ ಯೋಧರು
ಗಡಿಯಲ್ಲಿ ಟೆಂಟ್ ಹಾಕಿ ಬಿಡಾರ ಹೂಡುವ ಮೂಲಕ ಚೀನಾಗೆ ತಿರುಗೇಟು ನೀಡಿದ್ದಾರೆ. ಡೋಕ್ಲಾಮ್ ಗಡಿಯಲ್ಲಿ ಬಿಡಾರ ಹೂಡಿರುವ ಭಾರತೀಯ ಯೋಧರಿಗೆ ನಿರಂತರವಾಗಿ ಆಹಾರ ಹಾಗೂ ಮತ್ತಿತರ ಅವಶ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ ಈ ಮೂಲಕ ಚೀನಾದ ಯಾವುದೇ ಒತ್ತಡ ಹಾಗೂ ಬೆದರಿಕೆಗಳಿಗೆ ಮಣಿಯದಿರಲು ಭಾರತ ನಿರ್ಧರಿಸಿದೆ.
 
ಸೇನಾ ಪಡೆಗಳನ್ನು ಭಾರತ ವಾಪಸ್ ಕರೆಸಿಕೊಳ್ಳುವವರೆಗೂ ಭಾರತದೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸುವುದಿಲ್ಲ ಎಂದು ಚೀನಾ ಈ ಹಿಂದೆ ಸ್ಪಷ್ಟಪಡಿಸಿತ್ತು. ಮತ್ತೊಂದೆಡೆ ಚೀನಾ ಸರ್ಕಾರದ ಪತ್ರಿಕೆಗಳೂ ಕೂಡ ಭಾರತವನ್ನು ಬೆದರಿಸುವ ಪ್ರಯತ್ನಗಳನ್ನು ಮಾಡಿತ್ತು. ಈ ಎಲ್ಲಾ ಬೆದರಿಕೆಗಳ ಹೊರತಾಗಿಯೂ ಭಾರತೀಯ ಯೋಧರು ಟೆಂಟ್ ಗಳನ್ನು ಕಟ್ಟಿ ಡೋಕ್ಲಾಮ್ ಪ್ರದೇಶದಲ್ಲಿ ಬಿಡಾರ ಹೂಡುವ ಮೂಲಕ ಸೆಡ್ಡು ಹೊಡೆದಿದ್ದಾರೆ. 
 

ವೆಬ್ದುನಿಯಾವನ್ನು ಓದಿ