ಜಮ್ ಶೆಡ್ ಪುರ : 3 ವರ್ಷದ ಮಗುವಿನ ಮೇಲೆ 12 ವರ್ಷದ ಬಾಲಕ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಜಾರ್ಖಂಡ್ ನ ಪೂರ್ವ ಸಿಂಗ್ ಭೂಮ್ ಜಿಲ್ಲೆಯಲ್ಲಿ ನಡೆದಿದೆ.
ಮಗು ಪಾರ್ಸುಡಿಹ್ ಪೊಲೀಸ್ ಠಾಣಾ ಪ್ರದೇಶದ ಲೊಕೊ ಕಾಲೋನಿಯಲ್ಲಿರುವ ತನ್ನ ಮನೆಯಲ್ಲಿ ಆಟವಾಡುತ್ತಿದ್ದಾಗ ನೆರೆಮನೆಯಲ್ಲಿದ್ದ ಬಾಲಕ ಇಂತಹ ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ಮಗುವಿನ ಪೋಷಕರು ಬಾಲಕ ಮತ್ತು ಆತನ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ.
ಆರೋಪಿಯ ತಂದೆ ಪಟ್ಟಣದಿಂದ ಹೊರಗಿದ್ದ ಕಾರಣ ಕುಟುಂಬದ ಉಳಿದವರ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.