ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ವರನಿಗೆ ತಕ್ಕ ಪಾಠ ಕಲಿಸಿದ ವಧು
ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಭಾವೀ ಪತಿ ಮತ್ತು ಆತನ ಸಹೋದರ, ತಂದೆಯ ತಲೆಯನ್ನು ಅರ್ಧ ಕೂದಲು ಕತ್ತರಿಸಿ ವಧು ‘ಸಾಹಸ’ ತೋರಿದ್ದಾಳೆ.
ವಧುವಿನ ಈ ಕೃತ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ವಧುವಿನ ಧೈರ್ಯ ಕೊಂಡಾಡಿದರೆ ಇನ್ನು ಕೆಲವರು ವರದಕ್ಷಿಣೆ ಕೇಳಿದ್ದ ವರನಿಗೆ ಛೀಮಾರಿ ಹಾಕಿದ್ದಾರೆ. ಮದುವೆಗೆ ಐದು ದಿನವಿರುವಾಗ ವರನ ಕಡೆಯವರು ಹೊಸ ಹೊಸ ಬೇಡಿಕೆ ಇಟ್ಟಿದ್ದರು. ಈಡೇರಿಸದೇ ಇದ್ದರೆ ಮದುವೆ ಮುರಿಯುವುದಾಗಿ ಬೆದರಿಕೆ ಹಾಕಿದ್ದರು ಎಂದು ವಧುವಿನ ಕಡೆಯವರು ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಈ ಸಂಬಂಧ ಪೊಲೀಸರಿಗೆ ದೂರನ್ನೂ ನೀಡಿದ್ದಾರೆ.