ಮೊಡವೆ ಸಮಸ್ಯೆ ಇರುವವರು ಈ ಆಹಾರಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ
ಸೋಮವಾರ, 22 ಅಕ್ಟೋಬರ್ 2018 (12:08 IST)
ಬೆಂಗಳೂರು : ಹೆಚ್ಚಿನವರು ಮುಖದಲ್ಲಿ ಮೂಡುವ ಮೊಡವೆಗಳ ಸಮಸ್ಯೆಯಿಂದ ಕಂಗೆಟ್ಟಿರುತ್ತಾರೆ. ಅಂತವರ ಈ ಮೊಡವೆ ಸಮಸ್ಯೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಾಗದಿದ್ದರೂ ಅವರು ಈ ಆಹಾರಗಳನ್ನು ಸೇವಿಸದಿದ್ದರೆ ಮೊಡವೆ ಮೂಡುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಸಿಕೊಳ್ಳಬಹುದು.
ಬ್ರೆಡ್ : ಬ್ರೆಡ್ ನಲ್ಲಿರುವ ಜಿಡ್ಡು ಮೊಡವೆ ಮೂಡಲು ಮೂಲ ಕಾರಣ. ಇದು ಚರ್ಮದಲ್ಲಿ ಉರಿ ಹೆಚ್ಚಾಗಲು ಕಾರಣವಾಗಿ ಮೊಡವೆಯನ್ನು ಕೆರಳಿಸುತ್ತದೆ.
ಬಟಾಟೆ ಚಿಪ್ಸ್ : ಪೊಟ್ಯಾಟೋ ಚಿಪ್ಸ್ ತುಂಬಾ ರುಚಿಯಾದ ತಿಂಡಿ. ಆದರೆ ಮೊಡವೆಗಳು ಮೂಡುವಲ್ಲಿ ಇದರ ಪಾತ್ರ ಬಹು ದೊಡ್ಡದು. ಇದರಲ್ಲಿ ಅಧಿಕ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಮತ್ತು ಇನ್ಸುಲಿನ್ ಇರುತ್ತದೆ. ಇದರಿಂದಲೂ ಚರ್ಮ ಒಣಗಿ ಮೂಡವೆ ಮೂಡುತ್ತದೆ.
ಚಾಕೋಲೇಟ್ : ಇತ್ತೀಚಿನ ಸಂಶೋಧನೆಗಳಿಂದ ಚಾಕೋಲೇಟ್ ಮತ್ತು ಮೊಡವೆಗಳಿಗೆ ನೇರ ಸಂಬಂಧವಿದೆ ಎಂದು ತಿಳಿದುಬಂದಿದೆ. ಇದಕ್ಕೆ ಮುಖ್ಯ ಕಾರಣ ‘ಸಕ್ಕರೆ’, ಇದು ನಮ್ಮ ಚರ್ಮಕ್ಕೆ ನೇರವಾಗಿ ಹಾನಿಯುಂಟು ಮಾಡುತ್ತದೆ. ನಿಮಗೆ ಚಾಕೋಲೇಟ್ ತಿನ್ನಲೇಬೇಕೆನಿಸಿದರೆ ‘ಡಾರ್ಕ್ ಚಾಕೋಲೇಟ್’ ತಿನ್ನಿ.
ಸೋಡಾ : ಸೋಡಾದಲ್ಲಿ ಯಾವುದೇ ಪೋಷಕಾಂಶಗಳಿಲ್ಲ. ಹಾಗಾಗಿ ಇದು ನಿಮ್ಮ ಚರ್ಮಕ್ಕೆ ಯಾವುದೇ ರೀತಿಯಲ್ಲಿ ಒಳ್ಳೆಯದು ಮಾಡುವುದಿಲ್ಲ. ಇದರಲ್ಲಿ ಫ್ರಕ್ಟೋಸ್ ಅಂಶವಿದ್ದು, ಇದು ಸಕ್ಕರೆಯ ಮೂಲಾಂಶ. ಇದು ಚರ್ಮಕ್ಕೆ ಹಾನಿಕರ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.