ಅಂಧ ಮಕ್ಕಳಿಗೆ ಲೈಂಗಿಕ ಕಿರುಕುಳ: ದೆಹಲಿಯಲ್ಲಿ ಬ್ರಿಟನ್ ಪ್ರಜೆ ಬಂಧನ

ಸೋಮವಾರ, 4 ಸೆಪ್ಟಂಬರ್ 2017 (18:19 IST)
ಜಗತ್ತಿನಲ್ಲಿ ಎಂಥೆಂಥಾ ಜನರಿದ್ದಾರೆ ನೋಡಿ. ಅಂಧ ಮಕ್ಕಳನ್ನೂ ಬಿಡದೇ ಲೈಂಗಿಕ ಕಿರುಕುಳ ನೀಡಿದ್ದ ಬ್ರಿಟನ್ ಪ್ರಜೆಯನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರ್`.ಕೆ. ಪುರಂನಲ್ಲಿರುವ ರಾಷ್ಟ್ರೀಯ ಅಂಧರ ಅಸೋಸಿಯೇಶನ್ ನಡೆಸುತ್ತಿರುವ ಶಾಲೆಯಲ್ಲಿ ಈತ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
 

54 ವರ್ಷದ ಮುರ್ರೆ ಡೆನಿಸ್ ವಾರ್ಡ್ ಬಂಧಿತ ಆರೋಪಿಯಾಗಿದ್ದು, 8-9 ವರ್ಷಗಳಿಂದ ಶಾಲೆಯ ದಾನಿಗಳಲ್ಲೊಬ್ಬರಾಗಿರುವ ವಾರ್ಡ್ ಪದೇ ಪದೇ ಶಾಲೆಗೆ ಭೇಟಿ ನೀಡುತ್ತಿದ್ದ. ಈ ಸಂದರ್ಭ 8 ವರ್ಷದೊಳಗಿನ ಮೂರ್ನಾಲ್ಕು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ನಿನ್ನೆ ಮಧ್ಯಾಹ್ನ ಶಾಲೆಯಿಂದ ಬಂದ ದೂರವಾಣಿ ಕರೆ ಆಧರಿಸಿದ ಪೊಲೀಸರು ವಾರ್ಡ್`ನನ್ನ ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ವಾರ್ಡ್ ವಿರುದ್ಧ ಕೇಸ್ ದಾಖಲಿಸಲಾಗಿದೆ. ಪ್ರಾಥಂಇಕವಾಗಿ ಲ್ಯಾಪ್ ಟಾಪ್ ಪರಿಶಿಲನೆ ವೇಳೆ ಆಕ್ಷೇಪಾರ್ಹ ಮಕ್ಕಳ ವಿಡಿಯೋಗಳಿರುವುದು ಕಂಡುಬಂದಿದೆ. ಮೊಬೈಲ್ ಕೂಡ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಬ್ರಿಟನ್ನಿನ ಗ್ಲೌಸ್ಟರ್ ಶೇರ್ ನಿವಾಸಿಯಾಗಿರುವ ವಾರ್ಡ್ ಗುರ್ ಗಾಂವ್`ನ ಸ್ಟರ್ ಲೈಟ್ ಟೆಕ್ನಾಲಜಿ ಸಂಸ್ಥೆಯಲ್ಲಿ 2012ರವರೆಗೆ ಕೆಲಸ ಮಾಡುತ್ತಿದ್ದ. ಪಾರ್ಶ್ವವಾಯುಗೆಎ ತುತ್ತಾಗಿದ್ದರಿಂದ ಕೆಲಸ ಬಿಟ್ಟಿದ್ದ. ಎನ್ನಲಾಗಿದೆ. ಅಂಧ ಮಕ್ಕಳ ರಕ್ಷಣೆ ಬಗ್ಗೆ ನಿರ್ಲಕ್ಷ್ಯವಹಿಸಿದ ಶಾಲೆ ವಿರುದ್ಧವೂ ತನಿಖೆಗೆ ಮಕ್ಕಳ ಹಕ್ಕು ರಕ್ಷಣಾ ವಕೀಲರು ಒತ್ತ಻ಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ