ವಾಜಪೇಯಿ ಚಿತಾಭಸ್ಮ ಪಡೆಯಲು ದೆಹಲಿಗೆ ದೌಡಾಯಿಸಿದ ಯಡಿಯೂರಪ್ಪ
ಕರ್ನಾಟಕದ ಏಳು ನದಿಗಳಲ್ಲಿ ವಾಜಪೇಯಿ ಚಿತಾಭಸ್ಮ ವಿಸರ್ಜಿಸಲಾಗುವುದು. ಹೀಗಾಗಿ ಬಿಜೆಪಿ ಮುತ್ಸುದ್ದಿ ನಾಯಕನ ಚಿತಾಭಸ್ಮ ಪಡೆಯಲು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ.
ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಎಲ್ಲಾ ರಾಜ್ಯಗಳ ಬಿಜೆಪಿ ಅಧ್ಯಕ್ಷರಿಗೆ ವಾಜಪೇಯಿ ಚಿತಾಭಸ್ಮ ವಿತರಿಸಲಿದ್ದಾರೆ. ಆಯಾ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷರು ಆಯಾ ರಾಜ್ಯಗಳಲ್ಲಿ ಅಸ್ಥಿ ವಿಸರ್ಜಿಸಲಿದ್ದಾರೆ. ಬಿಎಸ್ ವೈ ಜತೆಗೆ ಸಂಸದ ಪಿಸಿ ಮೋಹನ್, ಸುರೇಶ್ ಅಂಗಡಿ ಅವರೂ ತೆರಳಿದ್ದಾರೆ.