ಬಿಎಸ್‌ಎಫ್ ಸಹದ್ಯೋಗಿಯನ್ನು ಇರಿದು ಎಲ್‌ಎಂಜಿ ಗನ್‌ನೊಂದಿಗೆ ಪರಾರಿಯಾದ ಪೇದೆ

ಭಾನುವಾರ, 24 ಜುಲೈ 2016 (17:14 IST)
ಬಿಎಸ್‌ಎಫ್‌ ಪೇದೆಯೊಬ್ಬ ತನ್ನ ಸಹದ್ಯೋಗಿಯನ್ನು ಚಾಕುವಿನಿಂದ ತಿವಿದು ಎಲ್‌ಎಂಜಿ ಗನ್‌ ಮತ್ತು ಭಾರಿ ಪ್ರಮಾಣದ ಸಜೀವ ಗುಂಡುಗಳೊಂದಿಗೆ ಪರಾರಿಯಾದ ಘಟನೆ ವರದಿಯಾಗಿದೆ.
 
ಘಟನೆಯಿಂದಾಗಿ ಜಮ್ಮು ಕಾಶ್ಮಿರದ ಅಖನೂರ್ ಸೆಕ್ಟರ್‌ನಲ್ಲಿ ಭಾರಿ ಪ್ರಮಾಣದ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಆರೋಪಿಯನ್ನು ರಾಜೀವ್ ರಂಜನ್ ಎಂದು ಗುರುತಿಸಲಾಗಿದ್ದು, ಸಹದ್ಯೋಗಿ ರಾಜೀರ್ ಸಿಂಗ್‌ನೊಂದಿಗೆ ಸಣ್ಣ ವಿಷಯಕ್ಕಾಗಿ ಜಗಳ ತೆಗೆದು ಚಾಕುವಿನಿಂದ ಇರಿದಿದ್ದಾನೆ ಎಂದು ಬಿಎಸ್‌ಎಫ್‌ ಅಧಿಕಾರಿಗಳು ತಿಳಿಸಿದ್ದಾರೆ. 
 
ಗಾಯಗೊಂಡ ಪೇದೆ ರಾಜಬೀರ್ ಸಿಂಗ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
 
ಏತನ್ಮಧ್ಯೆ, ಆರೋಪಿ ಬಂಧನಕ್ಕಾಗಿ ಎಲ್ಲಾ ಚೆಕ್‌‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ